Select Your Language

Notifications

webdunia
webdunia
webdunia
webdunia

ಮನೆ ಕುಸಿದು 2 ಸಾವು

ಮನೆ ಕುಸಿದು  2 ಸಾವು
ಚಿಕ್ಕಬಳ್ಳಾಪುರ , ಭಾನುವಾರ, 22 ನವೆಂಬರ್ 2015 (10:18 IST)
ಕಳೆದ 15 ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ಕರಿಯಪ್ಪನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಸುದರ್ಶನ್ (20), ಆಸಿಫ್ (8) ಎಂದು ಗುರುತಿಸಲಾಗಿದೆ.
 
ಹಲವು ದಿನಗಳಿಂದ ನಿರಂತರವಾಗಿ ಮನೆ ಬೀಳುತ್ತಿರುವ ಪರಿಣಾಮ ಮನೆಯ ಗೋಡೆ ಸಾಕಷ್ಟು ನೆನೆದಿತ್ತು.ಹೀಗಾಗಿ ಗೋಡೆ ಕುಸಿದು ಬಾಲಕ ಆಸೀಫ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ದುರದೃಷ್ಟವಶಾತ್ ಕೂಲಿ ಕೆಲಸಕ್ಕಾಗಿ ಕರೆಯಲು ಆ ಮನೆಗೆ ಮನೆಗೆ ಬಂದಿದ್ದ ಸುದರ್ಶನ್ ಎಂಬಾತ ಸಹ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾನೆ. 
 
ಮನೆಯ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಮೆಹಬೂಬ್ ಬೀ ಹಾಗೂ ಹನೀಫಾ ಎಂಬುವರನ್ನು ರಕ್ಷಿಸಲಾಗಿದ್ದು ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 
 
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada