ಕೋಲಾರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಭೇಟಿ

Webdunia
ಬುಧವಾರ, 23 ಆಗಸ್ಟ್ 2017 (19:27 IST)
ನವಜಾತ ಶಿಶುಗಳು ಸಾವಿಗೀಡಾಗಿದ್ದ ಕೋಲಾರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.3 ಮಕ್ಕಳು ಅಸುನೀಗಿದ ಬಗ್ಗೆ ಸಚಿವರು ಮಾಹಿತಿ ಕಲೆ ಹಾಕಿದ್ದಾರೆ.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಹುಟ್ಟಿದ ಸಂದರ್ಭ ಅತ್ಯಂತ ಕಡಿಮೆ ತೂಕವಿದ್ದುದರಿಂದ ಮಕ್ಕಳು ಮೃತಪಟ್ಟಿವೆ. ಚಿಂತಾಮಣಿಯಿಂದ ಬಂದಿದ್ದ ಅವಳಿ, ಮತ್ತೆರಡು ಅವಳಿ ಮಕ್ಕಳು ಹುಟ್ಟುವಾಗ ಕಡಿಮೆ ತೂಕವಿದ್ದುದರಿಂದ ಮೃತಪಟ್ಟಿವೆ. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಲೋಪವಿದ್ದರೂ ತಿದ್ದಿಕೊಳ್ಳಲು ಸಿದ್ಧವಿದ್ದೇವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಸಿದ್ಧರಿದ್ದೇವೆ. ಆದರೆ, ಜಿಲ್ಲಾಸ್ಪತ್ರೆ ಬಗ್ಗೆ ಅಪನಂಬಿಕೆ ಮೂಡಿದರೆ ಬಡ ಜನ ಎಲ್ಲಿ ಹೋಗುತ್ತಾರೆ. ಈ ಬಗ್ಗೆ ಸಹಕರಿಸುವಂತೆ ಮಾಧ್ಯಮಗಳಿಗೆ ರಮೇಶ್ ಕುಮಾರ್ ಮನವಿ ಮಾಡಿದ್ದಾರೆ.

ಇದೇವೇಳೆ, ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆಂದು ಹೇಳಿದ ರಮೇಶ್ ಕುಮಾರ್, ಅವರ ಸಲಹೆ ಮೇರೆಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಕಾದ ಎಲ್ಲ ಸೌಲಭ್ಯ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇವೇಗೌಡರ ಮಕ್ಕಳು ನನ್ನ ಸಿಎಂ ಆಗಲು ಬಿಡ್ತಿರಲಿಲ್ಲ ಎಂದಿದ್ದ ಸಿದ್ದರಾಮಯ್ಯಗೆ ಜೆಡಿಎಸ್ ತಿರುಗೇಟು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮನುಷ್ಯನ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದು ಇದೇ ಅಂತಾರೆ ಡಾ ಸಿಎನ್ ಮಂಜುನಾಥ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೊನೆಗೂ ಅರೆಸ್ಟ್ ಆದ ಬೆಂಗಳೂರು ದರೋಡೆಕೋರರು: ಎಷ್ಟು ಹಣ ಸಿಕ್ತು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments