Select Your Language

Notifications

webdunia
webdunia
webdunia
webdunia

ಎರಡು ಸಂಸಾರ ನಿಭಾಯಿಸಲು ಸ್ಕೂಟರ್ ಕಳ್ಳನಾದ

ಎರಡು ಸಂಸಾರ ನಿಭಾಯಿಸಲು ಸ್ಕೂಟರ್ ಕಳ್ಳನಾದ
ಬೆಂಗಳೂರು , ಸೋಮವಾರ, 11 ಜುಲೈ 2016 (14:54 IST)
25ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಲು ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. 32 ವರ್ಷದ ಆರೋಪಿ ಮುರಳಿ ರಾಮ್ ರಾವ್ ಮಂತ್ರಿ ಮಾಲ್ ಎದುರುಗಡೆ ಇರುವ ಹೊಟೇಲ್ ಒಂದರ ಎದುರುಗಡೆ ನಿಲ್ಲಿಸಲಾಗಿದ್ದ ಹೊಂಡಾ ಡಿಯೋವನ್ನು ಕದಿಯುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 
 
ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಆತ ಎರಡು ಸಂಸಾರಗಳನ್ನು ನಡೆಸಲು ಬೈಕ್ ಕಳ್ಳನಾಗಿ ಪರಿವರ್ತಿತವಾಗಿದ್ದ ಎಂದು ತಿಳಿದು ಬಂದಿದೆ. ಆತ ಕಳ್ಳತನ ಮಾಡುವ ಕಥೆ ಮಾತ್ರ ಸಾಕಷ್ಟು ಆಸಕ್ತಿದಾಯಕವಾಗಿದೆ. 
 
ತನ್ನ ಇಬ್ಬರು ಪತ್ನಿಯರಲ್ಲಿ ಒಬ್ಬರ ಮನೆಗೆ ಹೋಗುವಾಗ ಆತ ಬಿಎಂಟಿಸಿ ಬಸ್ ಬಳಸುತ್ತಿದ್ದ. ಹಿಂತಿರುಗುವಾಗ ಬೈಕ್ ಕಳ್ಳತನ ಮಾಡುತ್ತಿದ್ದ. ಹೀಗೆ ಮಾಡಿ ಸುಮಾರು 25 ಬೈಕ್ ಕದ್ದು ಮಾರಾಟ ಮಾಡುವಲ್ಲಿ ಆತ ಯಶಸ್ವಿಯಾಗಿದ್ದ. ಬೈಕ್ ಕಳ್ಳತನ ಆತನ ಎರಡನೆಯ ವೃತ್ತಿಯಾಗಿ ಹೋಗಿತ್ತು.
 
 
ಆತ ಕದ್ದಿದ್ದ ಸುಮಾರು 22 ಬೈಕ್‌ಗಳನ್ನು (ಸುಮಾರು 15 ಲಕ್ಷ ಮೌಲ್ಯದ) ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿರುವ ಮುರಳಿ, ನನಗೆ ಎರಡು ಪತ್ನಿಯರು ಇದ್ದುದರಿಂದ ಕುಟುಂಬ ನಿರ್ವಹಣೆಗೆ ಈ ಕೃತ್ಯವನ್ನು ಆರಂಭಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಯರು ಬೈಕ್ ಬಗ್ಗೆ ಪ್ರಶ್ನಿಸಿದಾಗ ಅದು ತನ್ನ ಸ್ನೇಹಿತರದೆಂದು ಜಾರಿಕೊಳ್ಳುತ್ತಿದ್ದೆ ಎಂದು ಮುರುಳಿ ಹೇಳಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

65 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟನ ಬಂಧನ