ಜಗದೀಶ ಶೆಟ್ಟರ್ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಅವರನ್ನು ಸೋಲಿಸಿದರೆ ಇನ್ನೊಬ್ಬರಿಗೆ ಪಾಠ ಕಲಿಸಿದಂತಾಗುತ್ತದೆ ಎಂದು ಬಿಜೆಪಿಯವರು ಹಣಬಲ, ತೋಳ್ಳಲ ಬಳಕೆ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿಲ್ಲ. ನಾವೂನು ಅಷ್ಟೇ ಧೈರ್ಯದಿಂದ ಎದುರಿಸುತ್ತೇವೆ. ನಾನು ಲೋಕಸಭಾ ಚುನಾವಣೆಯಲ್ಲಿ ಸೋತೆ. ಅದಕ್ಕೆ ಕಾರಣಗಳು ಗೊತ್ತಿವೆ. ಇನ್ನೊಬ್ಬರತ್ತ ಬೆರಳು ಮಾಡುವುದಿಲ್ಲ. ರಾಜ್ಯಸಭೆ ವಿರೋಧ ಪಕ್ಷದ ನಾಯಕನಾಗಿ ರಾಜ್ಯದ ಜನ ಧ್ವನಿಯಾಗಿ, ರಾಜ್ಯಕ್ಕೆ ಹೆಸರು ಬರುವ ರೀತಿ ಕೆಲಸ ಮಾಡಿದ್ದೇನೆ' ಎಂದರು. ಮೋದಿ, ಅಮಿತ್ ಶಾ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದರೆ ಯಾವುದೇ ಆಕ್ಷೇಪ ಇರುತ್ತಿರಲಿಲ್ಲ. ಎರಡು ತಿಂಗಳ ಹಿಂದಿನಿಂದಲೇ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ, ಸರ್ಕಾರದ ಹಣದಲ್ಲಿ ಪಕ್ಷದ ಪರ ಪ್ರಚಾರ ಮಾಡಿದರು ಎಂದು ಆರೋಪಿಸಿದರು.