ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ನಿನ್ನೆ ಎಸ್ಐಟಿ ತಂಡ ಎರಡು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ.
ಎಚ್ ಡಿ ರೇವಣ್ಣಗೆ ಹೈಪರ್ ಗ್ಯಾಸ್ಟ್ರೈಟಿಸ್ ಸಮಸ್ಯೆಯಿದೆ. ಈ ಹಿನ್ನಲೆಯಲ್ಲಿ ಅವರ ಆರೋಗ್ಯ ಏರುಪೇರಾಗಿತ್ತು. ಹೀಗಾಗಿ ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ ಎಸ್ಐಟಿ ತಂಡ ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿತು. ಸುಮಾರು ಎರಡು ಗಂಟೆ ಕಾಲ ಚಿಕಿತ್ಸೆ ನೀಡಲಾಯಿತು.
ಮೊನ್ನೆಯಷ್ಟೇ ಎಸ್ ಐಟಿ ಅಧಿಕಾರಿಗಳು ಮಹಿಳೆಯರ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣರನ್ನು ಅವರ ನಿವಾಸದಿಂದಲೇ ವಶಕ್ಕೆ ಪಡೆದಿದ್ದರು. ಇಂದಿಗೆ ಅವರ ಎಸ್ಐಟಿ ಕಸ್ಟಡಿ ಅಂತ್ಯವಾಗುತ್ತಿದೆ. ಬಂಧನವಾದ ಬೆನ್ನಲ್ಲೇ ಅವರನ್ನು ಎಸ್ಐಟಿ ತಂಡ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿತ್ತು.
ಇದೀಗ ಎರಡು ದಿನಗಳ ಸೆರೆವಾಸದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಇಂದು ನ್ಯಾಯಾಲಯ ಅವರಿಗೆ ಬೇಲ್ ನೀಡುತ್ತದೆಯೋ ಅಥವಾ ಮತ್ತ ಎಸ್ಐಟಿ ಕಸ್ಟಡಿ ಮುಂದುವರಿಸುತ್ತದೋ ಕಾದು ನೋಡಬೇಕಿದೆ.