ಬೆಂಗಳೂರು: ವಕ್ಫ್ ಹೆಸರಲ್ಲಿ ಆಸ್ತಿ ಹೊಡಯುತ್ತಿದ್ದಾರೆ. ಅವರಿಗೆ ರಕ್ಷಣೆ ಕೊಡಬೇಡಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಕ್ಫ್ ವಿವಾದದ ಬಗ್ಗೆ ಅವರು ಮಾಧ್ಯಮಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇನೆ. ಓಲೈಸಲು ಸರ್ಕಾರದ ಆಸ್ತಿಯನ್ನು ಲೂಟಿ ಮಾಡುವವರಿಗೆ ಕೊಡುತ್ತಾ ಬಂದರೆ ಸರ್ಕಾರ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಇದು ಇತ್ಥೀಚೆಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಲ್ಲೂ ವಕ್ಫ್ ಗೆ ಸಂಬಂಧಪಟ್ಟ ಆಸ್ತಿಗಳು, ನಿರ್ಧಾರಗಳ ಬಗ್ಗೆ ಚರ್ಚೆಗಳಾಗಿತ್ತು. ಅದರ ಬಗ್ಗೆ ಪರಿಶೀಲನೆಯಾಗಬೇಕು ಎಂದು ಚರ್ಚೆಯಾಗಿದೆ.
ಈವತ್ತು ಕರ್ನಾಟಕದಲ್ಲಿ ಈ ರೀತಿಯ ವಾತಾವರಣ ನಿರ್ಮಾಣವಾಗಿರುವುದರಿಂದ ರೈತರು ಭಯಭೀತರಾಗಿದ್ದಾರೆ. ಮೊನ್ನೆ ವಿಜಯಪುರದಲ್ಲಿ ಆಯ್ತು, ಈಗ ಧಾರವಾಡದಲ್ಲಿ ಆಗಿದೆ. ರೈತರ ಹೆಸರಿನಲ್ಲಿರಲಿ, ಸರ್ಕಾರದ ಹೆಸರಿನಲ್ಲಿ ವಕ್ಫ್ ಹೆಸರಿನಲ್ಲಿ ಭೂಗಳ್ಳರು ಆ ಆಸ್ತಿಯನ್ನು ಲಪಟಾಯಿಸುವುದಕ್ಕೆ ಅವಕಾಶ ನೀಡಬಾರದು. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಕ್ಫ್ ಆಸ್ತಿ ನೋಟಿಫಿಕೇಷನ್ ಕುರಿತಂತೆ ಈಗ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಲು ಮುಂದಾಗಿದೆ. ಮುಂಬರುವ ಉಪಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ತಕ್ಕ ಅಸ್ತ್ರವೇ ಸಿಕ್ಕಂತಾಗಿದೆ. ಇಂದು ಬಿಜೆಪಿಯ ನಿಯೋಗ ವಿಜಯಪುರಕ್ಕೆ ಭೇಟಿ ನೀಡಿ ವಾಸ್ತವ ತಿಳಿಯಲೂ ಪ್ರಯತ್ನಿಸಿದೆ.