ರಾಮನಗರ: ಇಂದು ರಾಮನಗರದಲ್ಲಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗನ ಸೋಲು, ಜೆಡಿಎಸ್ ಪಕ್ಷದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ನಾನು ಮೂರು ಬಾರಿ ವಾಲ್ ರಿಪ್ಲೇಸ್ ಮೆಂಟ್ ಆಪರೇಷನ್ ಮಾಡಿದ್ದೇನೆ. ಆದರೂ ರಾಜ್ಯಾದ್ಯಂತ ಓಡಾಡಿ ಹೋರಾಟ ಮಾಡುತ್ತಿದ್ದೇನೆ. ಯಾರಿಗೋಸ್ಕರ ಹೋರಾಟ ಮಾಡಬೇಕು. ಈ ರಾಜ್ಯದ ಜನರಿಗಾಗಿ ಹೋರಾಟ ಮಾಡಿದ್ದೇನೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಜೊತೆಗೆ ಮಗ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಈಗ ಸೋತಿರಬಹುದು ಆದರೆ ಮುಂದೆ ಪಕ್ಷದ ಜವಾಬ್ಧಾರಿ ತೆಗೆದುಕೊಳ್ಳಲಿದ್ದಾನೆ. ರಾಜ್ಯಾದ್ಯಂತ ಓಡಾಡಿ ಮತ್ತೆ ಪಕ್ಷ ಸಂಘಟನೆ ಮಾಡಲಿದ್ದಾನೆ. ಹಿರಿಯರ ಸಲಹೆ ಪಡೆದು ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.
ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಬಗ್ಗೆ ಮಾತನಾಡಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹಾಗಿದ್ದರೆ ಮನೆಯಲ್ಲಿದ್ದು ರೆಸ್ಟ್ ಮಾಡಣ್ಣ ಎಂದು ಕುಹುಕ ಮಾತನಾಡಿದ್ದಾರೆ. ಮತ್ತೆ ಕೆಲವರು ಮೊದಲು ಜೆಡಿಎಸ್ ನ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವುದು ಬಿಡಿ. ಆಗ ಪಾರ್ಟಿ ಉದ್ದಾರವಾಗುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ.