Webdunia - Bharat's app for daily news and videos

Install App

ಸಂಗಾತಿ ಆಯ್ಕೆಗಾಗಿ ವೆಬ್ ಪೇಜ್ ತೆರೆದ ಮೋಡಿ ಚೆಲುವೆ ಇಂದುಜಾ ಪಿಳ್ಳೈ...?!

Webdunia
ಗುರುವಾರ, 5 ಮಾರ್ಚ್ 2015 (12:53 IST)
ನೀವು ಗಡ್ಡ ಬೆಳೆಸಿದ್ದೀರಾ, ಪ್ರಪಂಚವನ್ನು ನೋಡಲು ಉತ್ಸುಕರಾಗಿದ್ದೀರಾ, ಉದ್ಯೋಗವನ್ನು ದ್ವೇಷ ಮಾಡುವುದಿಲ್ಲವೇ, ತಂದೆ ತಾಯಿಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೀರಾ, ನಿಮ್ಮದು ಉತ್ತಮ ಧ್ವನಿಯೇ ? ಹಾಗಾದರೆ ನಿಮ್ಮ ಸ್ವ ವಿವರವನ್ನು ಫೇಸ್‍ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹಾಕಿ.
 
ಈ ಸುದ್ದಿ ಓದಿ ತಲೆ ಕೆಡಿಸಿಕೊಳ್ಳಬೇಡಿ. ವಿವಾಹಕ್ಕೆ ಸಿದ್ಧವಾಗಿರುವ ನಗರದ ಯುವತಿಯೋರ್ವಳು ಯುವಕರಿಗೆ ಬಹಿರಂಗವಾಗಿ ಆಫರ್ ನೀಡಿರುವ ಶೈಲಿ ಇದು. ಮದುವೆಗಾಗಿ ವಧು ವರರ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸುವುದು ಸಾಮಾನ್ಯ. ಆದರೆ ಈ ಯುವತಿ ತನ್ನ ವರನನ್ನು ಹುಡುಕಿಕೊಡಲು ಒಂದು ವೆಬ್ ಪೇಜನ್ನೇ ಆರಂಭಿಸಿದ್ದಾಳೆ. ಈಕೆ ಪ್ರಸ್ತುತ ಸೋಶಿಯಲ್ ಮೀಡಿಯಾಗಳ ಹಾಟ್ ಟಾಪಿಕ್ ಆಗಿದ್ದಾಳೆ. 
 
ಹೌದು, ರಾಜಧಾನಿಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಈ ಯುವತಿಯ ಹೆಸರು ಇಂದುಜಾ ಪಿಳ್ಳೈ. ಈಕೆ ತನ್ನ ಭವಿಷ್ಯದ ಬಾಳ ಸಂಗಾತಿಗಾಗಿ ಪ್ರತ್ಯೇಕವಾಗಿ ಒಂದು ವೆಬ್ ಪುಟವನ್ನೇ ತೆರೆದಿದ್ದಾಳೆ. 
 
ಇನ್ನು ಈಕೆಯನ್ನು ನೀವು ವರನ ಹುಡುಕಾಟಕ್ಕಾಗಿ ವೆಬ್ ಪೇಜ್ ಓಪನ್ ಮಾಡಿದ್ದು ಏಕೆ ಎಂದು ಪತ್ರಕರ್ತರು ಕೇಶಿದ ಪ್ರಶ್ನೆಗೆ ಉತ್ತರಿಸಿರುವ ಈಕೆ, ನಮ್ಮ ತಂದೆ-ತಾಯಿ ಮದುವೆ ಮಾಡಲು ಮುಂದಾಗಿದ್ದು, ವರನ ಹುಡುಕಾಟದಲ್ಲಿದ್ದಾರೆ. ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಜಾಹೀರಾತನ್ನೂ ನೀಡಿದ್ದರು. ಆದರೆ ಅದು ನನಗೆ ಮಾಮೂಲಿಯಾಗಿ ಕಂಡಿತು. ಈ ಹಿನ್ನೆಲೆಯಲ್ಲಿ ನಾನು ಪ್ತ್ಯೇಕ ವೆಬ್ ಪೇಜ್ ಸಿದ್ಧಪಡಿಸಲು ಮುಂದಾದೆ ಎಂದಿದ್ದಾರೆ. ಬಳಿಕ, ಜಾಹೀರಾತು ನೀಡಿ ಹುಡುಗನ್ನು ಹುಡುಕುವುದಕ್ಕಿಂತ ವೆಬ್‍ಪೇಜ್ ಓಪನ್ ಮಾಡಿ, ಯುವಕರೇ ನೇರವಾಗಿ ತಮ್ಮ ವಿವರವನ್ನು ಕಳುಹಿಸಿದರೆ ಉತ್ತಮವಲ್ಲವೇ ಎನ್ನುವ ನಿರ್ಧಾರಕ್ಕೆ ಬಂದೆ ಎಂದಿದಾರೆ. 
 
ಉದ್ಯಾನ ನಗರಿಯ ಈ ಚೆಲುವೆ ತನ್ನ ವಿವರ ಹಾಗೂ ಕನಸಿನ ಜೊತೆಗಾರ ಹೇಗಿರಬೇಕು ಎಂಬ ಬಗ್ಗೆ ಹಲವು ಷರತ್ತುಗಳೊಂದಿಗೆ ವೆಬ್ ಪುಟವನ್ನು ತೆರೆದಿದ್ದು, ಅದನ್ನು ಕಳೆದ ಮೂರು ವಾರಗಳ ಹಿಂದೆಯೇ ಚಾಲನೆ ನೀಡಿದ್ದಾಳೆ. 
 
ವೆಬ್ ಪೇಜ್‌ನಲ್ಲಿ ಆಕೆ ಏನನ್ನು ತಿಳಿಸಿರಬಹುದು ?
ಇಂದುಜಾ ಬಗೆಗಿನ ವಿವರಗಳು: 
1.ನಾನು ಕುಡಿಯುವುದಿಲ್ಲ ಮತ್ತು ಸ್ಮೋಕ್ ಮಾಡುವುದಿಲ್ಲ. 
2.ಮೊಟ್ಟೆ ತಿನ್ನುತ್ತೇನೆ, ಶಟಲ್ ಬ್ಯಾಡ್ಮಿಂಟನ್ ಆಟವಾಡುತ್ತೇನೆ.
3.ನೃತ್ಯ ಮತ್ತು ಹಾಡು ಹಾಡುತ್ತೇನೆ. ಆಗಾಗ ಇಂಗ್ಲಿಷ್ ಚಲನಚಿತ್ರ ಮತ್ತು ನಾಟಕಗಳನ್ನು ನೋಡುತ್ತೇನೆ. 
4.ಜಾಸ್ತಿ ಓದುವುದಿಲ್ಲ, ಫ್ರೆಂಡ್‍ಶಿಪ್ ಜಾಸ್ತಿ ಇಷ್ಟಪಡುವುದಿಲ್ಲ. 
5.ಉದ್ದ ಕೂದಲು ಬೆಳೆಸಲು ನನಗೆ ಇಷ್ಟವಿಲ್ಲ. 
6.ನಾನು ಮದುವೆಯಾದಲ್ಲಿ ಜೀವನ ಪರ್ಯಂತ ಜೊತೆಯಲ್ಲಿಯೇ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ
 
ಇನ್ನು ಈಕೆಯ ವೆಬ್ ಪೇಜ್ ಸಕ್ಕತ್ ಹಿಟ್ ಆಗಿದ್ದು, ಕೇವಲ ಮೂರು ವಾರಗಳಲ್ಲಿ 2.50 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಾವಿರಾರು ಯುವಕರು ತಮ್ಮ ಪ್ರಪೋಸಲ್‌ಗಳನ್ನು ಕಳುಹಿಸಿದ್ದಾರೆ. ಮತ್ತೊಂದು ವಿಷಯ ಅಂದರೆ ಯುವಕನ ಆಯ್ಕೆ ಬಗ್ಗೆ ಇನ್ನೂ ಫೈನಲ್ ಆಗಿಲ್ಲವಂತೆ. ಒಂದು ವೇಳೆ ನೀವು ಆಕೆಯನ್ನು ಮದುವೆಯಾಗಬೇಕಾದರೆ ಒಂದು ಪ್ರಪೋಸಲ್ ಕಳುಹಿಸಿ ನೋಡಿ!

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments