ಹಾಸನಾಂಬೆಯ ದೇವಾಲಯ ಇಂದು ಓಪನ್: ಭಕ್ತಾದಿಗಳಿಗೆ ಹೊಸ ರೂಲ್ಸ್ ತಪ್ಪದೇ ಗಮನಿಸಿ

Krishnaveni K
ಗುರುವಾರ, 9 ಅಕ್ಟೋಬರ್ 2025 (09:52 IST)
ಹಾಸನ: ಇಂದಿನಿಂದ ಐತಿಹಾಸಿಕ ಹಾಸನಾಂಬೆ ದೇವಾಲಯ ತೆರೆಯಲಿದ್ದು, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಜಿಲ್ಲಾಡಳಿತ ಕೆಲವೊಂದು ಕಟ್ಟುನಿಟ್ಟಿನ ಷರತ್ತು ವಿಧಿಸಿದೆ. ಈ ನಿಯಮಗಳು ವಿಐಪಿಗಳಿಗೂ ಅನ್ವಯವಾಗಲಿದೆ.

ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಾಲಯ ತೆರೆಯಲಾಗುತ್ತದೆ. ಈ ವೇಳೆ ಲಕ್ಷಾಂತರ ಭಕ್ತರು, ಗಣ್ಯರು ದೇವಿಯ ದರ್ಶನಕ್ಕೆ ಬರುತ್ತಾರೆ. ರಾಜ್ಯ ಸರ್ಕಾರಿ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪ ಅಲಂಕಾರ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುತ್ತದೆ.

ಆದರೆ ಕಳೆದ ವರ್ಷ ದರ್ಶನದ ವೇಳೆ ವಿಐಪಿ ಭಕ್ತರಿಗೆ ಬೇಕಾಬಿಟ್ಟಿ ದರ್ಶನಕ್ಕೆ ಅವಕಾಶವಿದೆ. ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕು ಎಂಬ ಆರೋಪಗಳು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ವಿಐಪಿಗಳಿಗೂ ಕಟ್ಟನಿಟ್ಟಿನ ನಿಯಮ ರೂಪಿಸಲಾಗಿದೆ.

ಇಂದು ದೇವಾಲಯವನ್ನು ತೆರೆಯಲಾಗುತ್ತದೆ. ನಾಳೆಯಿಂದ ಅಂದರೆ ಅಕ್ಟೋಬರ್ 10 ರಿಂದ 22 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ದರ್ಶನಕ್ಕೆ ಒಂದು ಸಾಲು ಮತ್ತು ಟಿಕೆಟ್ ಖರೀದಿಸಿ ಬರುವವರಿಗೆ ಒಂದು ಸಾಲು ಮಾಡಲಾಗಿದೆ. ವಿಐಪಿಗಳಿಗೆ ಬೆಳಿಗ್ಗೆ 10.30 ರಿಂದ 12.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ. ಅದರಲ್ಲೂ ಗಣ್ಯರ ಜೊತೆ ಕೇವಲ ನಾಲ್ಕು ಜನರಿಗೆ ಮಾತ್ರ ಜೊತೆಗೆ ಬರಲು ಅವಕಾಶವಿರುತ್ತದೆ. ಅಷ್ಟೇ ಅಲ್ಲದೆ ಗಣ್ಯರು ಬರುವ ಮೊದಲೇ ಮಾಹಿತಿ ನೀಡಬೇಕು. ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ ಅಲ್ಲಿಂದ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಬರಲು ವಿಐಪಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು, ಗೋಲ್ಡ್ ಕಾರ್ಡ್ ಪಡೆದು ಬರುವವರಿಗೂ ಬೆಳಿಗ್ಗೆ 7.30 ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮತ್ತು ಅನಾಹುತಗಳನ್ನು ತಡೆಯಲು ಆಂಬ್ಯುಲೆನ್ಸ್ ವ್ಯವಸ್ಥೆಯಿರುತ್ತದೆ.

ವಿಶೇಷವಾಗಿ ಹಾಸನಾಂಬೆ ದರ್ಶನಕ್ಕೆ ಬರುವಾಗ ಸಾಂಪ್ರದಾಯಿಕ ಉಡುಗೆ ತೊಟ್ಟೇ ಬರಬೇಕು. ಜಿಲ್ಲಾಡಳಿತ ಡ್ರೆಸ್ ಕೋಡ್ ನಿಗದಿಪಡಿಸಿದ್ದು ಪಾಶ್ಚಾತ್ಯ ಶೈಲಿಯ ಬಟ್ಟೆ ತೊಟ್ಟು ದೇವಾಲಯಕ್ಕೆ ಬರುವಂತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

Viral video: ಅಬ್ಬಬ್ಬಾ ಶಕ್ತಿಮಾನ್ ನಾಯಿಯಿದು.. ಕಾರಿನ ಸ್ಥಿತಿ ಏನು ಮಾಡಿತು ನೋಡಿ

ಅಜ್ಜಿಯ ಧೈರ್ಯವೇ ನನ್ನ ಶಕ್ತಿ: ಬಿಹಾರ ಚುನಾವಣೆ ನಂತರ ಫಸ್ಟ್ ಟೈಂ ಹೊರಗೆ ಬಂದ ರಾಹುಲ್ ಗಾಂಧಿ

ಮೋಸ ಮಾಡಿ ಗೆದ್ದ ಪ್ರಧಾನಿಗಳನ್ನು ನಾನು ಇದುವರೆಗೂ ನೋಡಿಲ್ಲ: ಮೋದಿಗೆ ಸಂತೋಷ್ ಲಾಡ್ ಟಾಂಗ್

ಮುಂದಿನ ಸುದ್ದಿ
Show comments