Select Your Language

Notifications

webdunia
webdunia
webdunia
webdunia

ಚೀನಾದ ಅಳಿಯನಾದ ಹಾಸನದ ಹುಡುಗ

ಚೀನಾದ ಅಳಿಯನಾದ ಹಾಸನದ ಹುಡುಗ
ಹಾಸನ , ಗುರುವಾರ, 7 ಮೇ 2015 (09:18 IST)
ಹಾಸನದ ಹೊಳೆನರಸೀಪುರದ ಯುವಕನೊಬ್ಬ ಚೀನಾದ ಅಳಿಯನಾಗಿದ್ದಾನೆ. ತಾವು ಪ್ರೀತಿಸಿದ್ದ ಚೀನಾದ ಯುವತಿಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಬುಧವಾರ ಅವರು ವಿವಾಹವಾದರು.
 
ಹೊಳೆನರಸೀಪುರ ತಾಲ್ಲೂಕಿನ ಡಾ.ಎ.ಆರ್‌.ನಾಗರಾಜು ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ರಾಘವೇಂದ್ರ ಕಳೆದೆರಡು ವರ್ಷಗಳಿಂದ ಚೀನಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಬೀಜಿಂಗ್‌ನ ಯುವತಿಯ ಪರಿಚಯವಾಗಿದೆ.ಪರದೇಶದಲ್ಲಿ ಭಾಷೆಯ ಸಮಸ್ಯೆಯಿಂದ ಪರದಾಡುತ್ತಿದ್ದ ರಾಘವೇಂದ್ರ ಅವರಿಗೆ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದ ಯುವಾನ್ ನೆರವಿಗೆ ಬಂದಿದ್ದಾಳೆ.
 
ಇವರಿಬ್ಬರಲ್ಲಿ ಬೆಳೆದ ಸ್ನೇಹ ಪ್ರೀತಿಗೆ ತಿರುಗಿದ್ದು ಇಬ್ಬರು ಹಿಂದೂ ಸಂಪ್ರದಾಯದಂತೆ ನಗರದ  ರಾಘವೇಂದ್ರ ಮಠದಲ್ಲಿ  ಬುಧವಾರ ಸಪ್ತಪದಿ ತುಳಿದಿದ್ದಾರೆ.
 
ವೃದ್ಧಾಪ್ಯದ ಕಾರಣದಿಂದ ಯುವಾನ್ ಪೋಷಕರು ವಿವಾಹಕ್ಕೆ ಬಂದಿರಲಿಲ್ಲ. ಹೀಗಾಗಿ ವರನ ಅಜ್ಜ  ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿದರು. 
 
ನ್ಯೂಜಿಲೆಂಡ್‌ನಲ್ಲಿ ಕೆಲಸಗಿಟ್ಟಿಸಿರುವ ಜೋಡಿ ಸದ್ಯದಲ್ಲಿಯೇ ಅಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. 

Share this Story:

Follow Webdunia kannada