Select Your Language

Notifications

webdunia
webdunia
webdunia
webdunia

ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಂದ ಅರೆಬೆತ್ತಲೆ ಡ್ಯಾನ್ಸ್ ಮಾಡಿಸಿದ ಎಸ್‌ಐ

ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಂದ ಅರೆಬೆತ್ತಲೆ ಡ್ಯಾನ್ಸ್ ಮಾಡಿಸಿದ ಎಸ್‌ಐ
ಗೌರಿಬಿದನೂರು: , ಮಂಗಳವಾರ, 2 ಫೆಬ್ರವರಿ 2016 (14:50 IST)
ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣದ ಆರೋಪಿಗಳಿಗೆ ಎಸ್‌‍ಐ ಸುಂದರ್ ನಾಗಿನ್ ಡ್ಯಾನ್ಸ್ ಮಾಡಿ ಎಂದು ಹೇಳುತ್ತಾ ನಾಗಿನ್ ಚಿತ್ರದ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿಸಿದ ಘಟನೆ ನಡೆದಿದೆ.  ದರೋಡೆಕೋರರಾದ ಪ್ರವೀಣ್ ಗ್ಯಾಂಗ್ ಸದಸ್ಯರನ್ನು ಅವರನ್ನು ಬಂಧಿಸಿ ಐವರನ್ನು ಅರೆಬೆತ್ತಲೆಗೊಳಿಸಿ ಎಸ್‌ಐ ಸುಂದರ್ ಆರೋಪಿಗಳಿಗೆ ನಾಗಿನ್ ಡ್ಯಾನ್ಸ್ ಮಾಡುವಂತೆ ಸೂಚಿಸಿದರು.

ಅರೆಬೆತ್ತಲೆ ಆರೋಪಿಗಳು ಮ್ಯೂಸಿಕ್‌ಗೆ ತಕ್ಕಂತೆ ಡ್ಯಾನ್ಸ್ ಮಾಡತೊಡಗಿದರು. ಅಂಡರ್‌ವೇರ್‌ನಲ್ಲಿ ಆರೋಪಿಗಳು ಮೈಬಳಕಿಸುತ್ತಾ ನೃತ್ಯಮಾಡಿದರು. ನೆಲದಲ್ಲಿ ಹೊರಳಾಡುತ್ತಾ ಹಾವಿನಂತೆ ಬಳುಕಿದರು.  ಎಸ್‌ಐ ಇವರ ನೃತ್ಯವನ್ನು ನೋಡಿ ಮನಸಾರೆ ಆನಂದಿಸಿದರು.

 ಸಬ್ಇನ್‌ಸ್ಪೆಕ್ಟರ್ ಸುಂದರ್ ಅವರು ತಾವು ಅವರನ್ನು ವಿಚಾರಣೆಗೆ ಕರೆಸಿದ್ದು ನಿಜ, ಆದರೆ ಡ್ಯಾನ್ಸ್ ಮಾಡಿಸಿಲ್ಲ ಎಂದು ಹೇಳಿದ್ದರೂ ವಿಡಿಯೋ ದೃಶ್ಯಗಳು ಸೆರೆಯಾಗಿದ್ದು, ಅವರ ವಿರುದ್ಧ ಆರೋಪಗಳನ್ನು ಪುಷ್ಠೀಕರಿಸಿದೆ .  ಸುಮಾರು ಏಳೆಂಟು ತಿಂಗಳ ಹಿಂದೆ ಈ ಪ್ರಕರಣ ನಡೆದಿದ್ದು, ಈ ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

Share this Story:

Follow Webdunia kannada