Webdunia - Bharat's app for daily news and videos

Install App

ಒನ್ ಕಪ್ ಟೀಗೆ ಅರ್ಧ ಗಂಟೆ ವೈಫೈ ಫ್ರೀ..!

Webdunia
ಬುಧವಾರ, 2 ನವೆಂಬರ್ 2016 (17:21 IST)
ಬಳ್ಳಾರಿ: ನೆಟ್ವರ್ಕ್ ಎಷ್ಟು ಸ್ಪೀಡಾಗಿ ಬೆಳಿತಿದೆ ಅಂದ್ರೆ, ಎಲ್ನೋಡಿದ್ರೂ 3ಜಿ, 4ಜಿಯದ್ದೆ ಮಾತು.. ಅದ್ರಲ್ಬೇರೆ ಇತ್ತೀಚೆಗೆ ರಿಲಯನ್ಸ್ ಕಂಪನಿಯವ್ರು ಜಿಯೋ ಸಿಮ್ ಮಾರುಕಟ್ಟೆಗೆ ರಿಲೀಸ್ ಮಾಡಿದ್ಮೇಲಂತೂ ಇಂಟರ್ನೆಟ್ ಪುಕ್ಕಟೆ ಅನ್ಸಿಬಿಟ್ಟಿದೆ.
ಆದರೆ ಇಂತಹ  ವೇಗದ ದುನಿಯಾದಲ್ಲಿ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಚಹಾ ಅಂಗಡಿ ನಡೆಸೋ ವ್ಯಕ್ತಿಯೊಬ್ಬ ಇದೀಗ ಸಖತ್ ಸುದ್ದಿಯಲ್ಲಿದ್ದಾನೆ. ಹೌದು ಪ್ರಧಾನಿ ಮೋದಿಯ ಡಿಜಿಟಲ್ ಇಂಡಿಯಾ ಪ್ಲಾನ್ ಅನ್ನ ಚಾಚು ತಪ್ಪದೇ ಪಾಲಿಸಿ ಉತ್ತಮ ಆದಾಯ ಗಳಿಸಿಕೊಳ್ಳುತ್ತಿದ್ದಾನೆ.
ಅರೇ..! ಅದ್ಹೇಗೆ ಚಹಾ ಅಂಗಡಿಯಲ್ಲಿ ಡಿಜಿಟಲ್ ಇಂಡಿಯಾ ಬಳಸಿಕೊಂಡು ಲಾಭ ಮಾಡಿಕೊಳ್ತಿದ್ದಾನೆ ಅಂದುಕೊಳ್ಳಬಹುದು. ಆದರೆ ಅದಕ್ಕೆ ಉತ್ತರ ಇಲ್ಲಿದೆ. 
 
ಬಳ್ಳಾರಿ ಜಿಲ್ಲೆ ಸಿರುಗುಪ್ಪದಲ್ಲಿ ಸೈಯದ್ ಖಾದರ್ ಬಾಷಾ ಎಂಬಾತ ತನ್ನ ಟೀ ಅಂಗಡಿಗೆ ವೈ ಫೈ ಅಳವಡಿಸಕೊಂಡು ಅಂಗಡಿಗೆ ಬರುವ ಗಿರಾಕಿಗಳಿಗೆ ಒಂದು ಕಪ್ ಟೀಗೆ ಪುಕ್ಕಟೆ ಅರ್ಧ ಗಂಟೆ ವೈಫೈ ಸೇವೆ ನೀಡುತ್ತಿದ್ದಾನೆ. ಅದರಲ್ಲೂ ಕೆಲವು ಕಟ್ಟಪ್ಪಣೆಗಳಿವೆ. ಒಬ್ಬ ವ್ಯಕ್ತಿ ದಿನಕ್ಕೆ ಒಂದು ಬಾರಿ ಮಾತ್ರ ಟೀ ಕುಡಿಯಬೇಕು. ಜೊತೆಗೆ ಒಂದೇ ಬಾರಿ ಆತನಿಗೆ ವೈಫೈ ಸೇವೆ ನೀಡಲಾಗುತ್ತೆ. 
ಬಾಷಾ ಈ ಸೇವೆ ಆರಂಭಿಸಿದ್ದೇ ತಡ ಶಾಲಾ ಕಾಲೇಜು ವಿದ್ಯಾರ್ಥಿಗಳು ಈತನ ಟೀ ಸ್ಟಾಲ್ಗೆ ಬರೋಕೆ ಮುಗಿ ಬೀಳ್ತಿದ್ದಾರೆ. 
 
100 ಟೀ ನೀಡ್ತಿದ್ದಾತ.. ಇದೀಗ 400 ಟೀ ನೀಡ್ತಿದ್ದಾನೆ..
 
ಅಭಿವೃದ್ದಿ.. ಡಿಜಿಟಲ್ ಇಂಡಿಯಾ ಬಳಸಿಕೊಳ್ಳೋದು ಅಂದ್ರೆ ಇದೆ ಅಲ್ವಾ.. ಮೊದಮೊದಲು ಕೇವಲ 100 ಟೀ ಮಾರಾಟ ಮಾಡ್ತಿದ್ದ ಬಾಷಾ ಇದೀಗ ಪುರಸೊತ್ತು ಇಲ್ಲದಂತೆ ದಿನಕ್ಕೆ 400 ಟೀ ಮಾರುತ್ತಾನೆ. ಜೊತೆಗೆ ನಿತ್ಯ 1500 ಗಿರಾಕಿಗಳು ಈತನ ಅಂಗಡಿಗೆ ಬಂದು ಟೀ ಕುಡಿದು ಹೋಗ್ತಾರೆ. ನೂರಾರು ವಿದ್ಯಾರ್ಥಿಗಳು ಟೀ ಜೊತೆ ವೈಫೈ ಬಳಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments