Daily Horoscope

ಜಿಮ್ ಟ್ರೈನರ್‌ ಸಮೀರ್‌ ಅತ್ಯಾಚಾರ ಕೇಸ್‌: ಮಹತ್ವದ ಬೆಳವಣಿಗೆ

Sampriya
ಸೋಮವಾರ, 6 ಏಪ್ರಿಲ್ 2026 (16:39 IST)
ಹುಬ್ಬಳ್ಳಿ: ಜಿಮ್‌ ಟ್ರೈನರ್‌ ಸಮೀರ್‌ ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ಇದೀಗ ಆರೋಪಿ ಬೆದರಿಕೆಯೊಡ್ಡಿ ₹70ಸಾವಿರ ಅಧಿಕ ಹಣ ಪಡೆದಿರುವುದಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಇದೀಗ ಪ್ರಕರಣದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿದ ಬಳಿಕ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಹಲವು ಬಾರಿ ಅತ್ಯಾಚಾರದ ಬಳಿಕ ಹಣವನ್ನು ಪಡೆದಿದ್ದಾನೆ. ₹5,000 ₹20,000 ₹25,000 ₹70,000 ಸಾವಿರಕ್ಕೂ ಅಧಿಕ ಹಣವನ್ನು ಸಂತ್ರಸ್ತೆ ಸಮೀರ್‌ಗೆ ಕಳುಹಿಸಿರುವ ಬಗ್ಗೆ ಸ್ಟ್ರೀನ್‌ಶಾಟ್‌ನಲ್ಲಿ ಪತ್ತೆಯಾಗಿದೆ.  

ಇನ್ನೂ ತನಿಖೆ ಸಲುವಾಗಿ ಸಮೀರ್ ಮೊಬೈಲ್‌ನ್ನು ಪರಿಶೀಲಿಸಿದಾಗ ಯುವತಿಯೊಂದಿಗಿನ ವಾಟ್ಸಾಪ್‌ ಚಾಟ್‌ಗಳು, ಕೆಲ ರೋಚಕ ವಿಡಿಯೋಗಳು ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಸಂತಸ್ತೆ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋ ಕೂಡ ಸಿಕ್ಕಿದ್ದವು.

ಸಮೀರ್ ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ ಮಾತ್ರೆ ಕೊಡಿಸುತ್ತಿದ್ದ. ಒಂದು ವೇಳೆ ನಿರಾಕರಿಸಿದ್ದರೆ ಒತ್ತಡ ಹೇರುತ್ತಿದ್ದ. ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವಾಗ ವಿಡಿಯೋ ಮಾಡಿ ಕಳಿಸುವಂತೆ ಸಂತ್ರಸ್ತೆಗೆ ಸೂಚಿಸಿದ್ದ. ಹಲವು ಬಾರಿ ಗರ್ಭಪಾತದ ಮಾತ್ರೆ ಸೇವಿಸಿರುವುದು ಬಯಲಾಗಿದೆ. 

ಈಗಾಗಲೇ ಸಂತ್ರಸ್ತ ಯುವತಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಇನ್ನೂ ಸಮೀರ್ ಕೂಡ ಕಿಡ್ನ್ಯಾಪ್‌ ಕೇಸ್ ದಾಖಲಿಸಿದ್ದಾನೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ