ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ದುಃಖವಾಗಿದೆ: ಭೈರಪ್ಪ ನಿಧನಕ್ಕೆ ಭಗವಾನ್‌ ಸಂತಾಪ

Sampriya
ಬುಧವಾರ, 24 ಸೆಪ್ಟಂಬರ್ 2025 (19:00 IST)
Photo Credit X
ಮೈಸೂರು: ಕನ್ನಡದ ಮೇರು ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ನಷ್ಟ ನನಗೆ ಹಾಗೂ ನಮ್ಮ ಮನೆಯರಿಗೆ ಆಗಿದೆ ಎಂದು ವಿಮರ್ಶಕ, ಚಿಂತಕ ಕೆ.ಎಸ್‌.ಭಗವಾನ್‌ ತಿಳಿಸಿದ್ದಾರೆ.

ಭೈರಪ್ಪ ಬಹಳ ಹೆಸರಾಂತ ಕಾದಂಬರಿಕಾರರು. ಜೀವನದ ಎಲ್ಲಾ ಮಗ್ಗಲುಗಳು, ಕಷ್ಟಗಳನ್ನು ತಮ್ಮ ಕಾದಂಬರಿಗಳಲ್ಲಿ ತುಂಬಾ ಆಳವಾಗಿ ಚಿತ್ರಿಸಿದ್ದರು. ವೈವಿಧ್ಯಮಯ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಬಹುಶಃ ಅವರಷ್ಟು ಜನಪ್ರಿಯವಾದ ಕಾದಂಬರಿಕಾರ ನಮ್ಮಲ್ಲಿ ಸದ್ಯಕ್ಕೆ ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರ ಅಗಲಿಕೆ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಷ್ಟೇ ನೋವು ತಂದಿದೆ ಎಂದು ಹೇಳಿದ್ದಾರೆ.

ಭೈರಪ್ಪ ಅವರು ನಮ್ಮ ಎದುರು ಮನೆಯಲ್ಲೇ ಇದ್ದರು. ನನ್ನ ಜತೆ ಬಹಳ ಪ್ರೀತಿ, ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಭೈರಪ್ಪ ಅವರು ಅಮರವಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂಬ ನಂಬಿಕೆ ಇದೆ. ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ದುಃಖವಿದೆ. ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾಹಿತ್ಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಭೈರಪ್ಪ ಅವರದ್ದು ಸಾಂಪ್ರದಾಯಿಕ ಬರವಣಿಗೆಯಾಗಿತ್ತು. ನನ್ನದು ಭಿನ್ನವಾಗಿತ್ತು, ಸಮಾಜದಲ್ಲಿನ ಜಾತಿ ತಾರತಮ್ಯ, ಭೇದ ಭಾವಗಳ ಬಗ್ಗೆ ನನ್ನ ಬರವಣಿಗೆ ಇದೆ. ಅವರ ಕಾದಂಬರಿಗಳಲ್ಲಿ ವಂಶವೃಕ್ಷ ನನಗೆ ಇಷ್ಟ. ಬಹಳ ಒಳ್ಳೆಯ ಕಾದಂಬರಿ. ಅವರ ಕಾದಂಬರಿಗಳ ಬಗ್ಗೆಯೂ ನನ್ನ ಅಭಿಪ್ರಾಯ ಬರೆದಿದ್ದೇನೆ. ನಮ್ಮ ವಿಚಾರಧಾರೆಗಳು ಬೇರೆಯಾದರೂ ನಮ್ಮ ನಡುವೆ ಉತ್ತಮ ಸ್ನೇಹ ಇತ್ತು ಎಂದು ಸ್ಮರಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೃದಯದ ಆರೋಗ್ಯ ನೋಡಿಕೊಳ್ಳಲು ಸಿಂಪಲ್ ಟ್ರಿಕ್ಸ್ ಹೇಳುತ್ತಾರೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಜೆಪಿ ಮೇಲೆ ಗುತ್ತಿಗೆದಾರರಿಗೆ ಕಮಿಷನ್ ಆರೋಪ ಮಾಡಿದ್ರಿ, ನಿಮ್ದೇನು ಕತೆ: ಆರ್ ಅಶೋಕ್ ಟಾಂಗ್

ಇನ್ಫೋಸಿಸ್ ನವರು ಬೃಹಸ್ಪತಿಗಳಾ ಎಂದ ಸಿದ್ದರಾಮಯ್ಯ: ನಿಮಗಿಂತಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ನೆಟ್ಟಿಗರು

ಪಾಕಿಸ್ತಾನ ದಾಳಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟಿಗರ ಸಾವು: ರಶೀದ್ ಖಾನ್ ಆಕ್ರೋಶ

ಮುಂದಿನ ಸುದ್ದಿ
Show comments