ಹುಬ್ಬಳ್ಳಿ : ಹಿಜಬ್ ವಿವಾದ ಈಗ ಸಿಜೆಐಗೆ ಹೋಗಿರುವುದರಿಂದ ಸರ್ಕಾರ ಯಾವುದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳೇ ಅಂತಿಮ ನಿರ್ಧಾರದ ಮೂಲಕ ತೀರ್ಪನ್ನು ನೀಡಬೇಕಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಈಗಾಗಲೇ ಹಿಜಬ್ ಕುರಿತು ದ್ವಿ ಸದಸ್ಯ ಪೀಠ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ಸಿಜೆಐಗೆ ಒಪ್ಪಿಸಿದೆ. ಸಿಜೆಐ ಈ ಪ್ರಕರಣದ ಆಳಗಲವನ್ನು ಅಧ್ಯಯನ ಮಾಡಿ ತೀರ್ಪನ್ನು ನೀಡಲಿದೆ. ಅಲ್ಲಿಯವರೆಗೆ ಕಾಯಬೇಕು ಅಷ್ಟೇ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.