Select Your Language

Notifications

webdunia
webdunia
webdunia
webdunia

ರೈತರಿಗೆ ಬೆಳೆವಿಮೆ ನೀಡುವಲ್ಲಿ ಸರಕಾರ ತಾರತಮ್ಯ: ಶೆಟ್ಟರ್ ಕಿಡಿ

ರೈತರಿಗೆ ಬೆಳೆವಿಮೆ ನೀಡುವಲ್ಲಿ ಸರಕಾರ ತಾರತಮ್ಯ: ಶೆಟ್ಟರ್ ಕಿಡಿ
ಹಾವೇರಿ , ಸೋಮವಾರ, 31 ಆಗಸ್ಟ್ 2015 (17:38 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ  ರೈತರಿಗೆ ಬೆಳೆವಿಮೆ ನೀಡುವಲ್ಲಿ ತಾರತಮ್ಯ ಎಸುಗುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
 
ಹಾವೇರಿಯ ಕ್ರೀಡಾಂಗಣದಲ್ಲಿ ನಡೆದ ರೈತ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಂಡ ಅವರು, ಸರಕಾರ ರೈತರಿಗೆ ಶಾಶ್ವತವಾಗಿ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ರಾಜ್ಯ ಸರಕಾರ ರೈತರ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕುತ್ತಿದೆ  ಎಂದು ಲೇವಡಿ ಮಾಡಿದರು.
 
ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ ಸರಕಾರಕ್ಕೆ ಬುದ್ದಿ ಬಂದಿಲ್ಲ. ಸಾಲ ಪಾವತಿಸುವಂತೆ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುವುದನ್ನು ಮುಂದುವರಿಸಿವೆ ಎಂದು ಗುಡುಗಿದರು.
 
ಬ್ಯಾಂಕ್‌ಗಳು, ಲೇವಾದೇವಿ ಉದ್ಯಮಿಗಳು ರೈತರು ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿವೆ. ಬೆಳೆಯನ್ನೇ ಬೆಳೆಯದ ರೈತ ಸಾಲವನ್ನು ಮರುಪಾವತಿಸಲು ಹೇಗೆ ಸಾಧ್ಯ. ಸರಕಾರ ಬ್ಯಾಂಕ್ ಮತ್ತು ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Share this Story:

Follow Webdunia kannada