ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಸರಕಾರ..!

Webdunia
ಬುಧವಾರ, 18 ಜುಲೈ 2018 (18:46 IST)
ಮಹಿಳಾ ಮೀನುಗಾರರಿಗೆ  ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸೇರಿದಂತೆ ವಿವಿದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿ ರಾಜ್ಯದ್ಯಾಂತ ಸುದ್ದಿ ಮಾಡಿರುವ ಉಡುಪಿ ಮಹಿಳಾ  ಮೀನುಗಾರರ ಬೇಡಿಕೆಗೆ ರಾಜ್ಯ ಸರಕಾರ ಆಸ್ತು ಅಂದಿದೆ

ಸಿ ಎಂ ಕುಮಾರಸ್ವಾಮಿ ಬಜೆಟ್ನಲ್ಲಿ ಕರವಾಳಿ ಮೀನುಗಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ 3 ದಿನಗಳ ಹಿಂದೆ ಉಡುಪಿ ಮೀನು ಮಾರುಕಟ್ಟೆಯ ಮಹಿಳಾ ಮೀನುಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ  ರಾಜ್ಯ ಸರಕಾರದ ಗಮನ ಸೆಳೆದಿದ್ರು. ಈಗ ರಾಜ್ಯ ಸರಕಾರ ಮಹಿಳಾ ಮೀನುಗಾರರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದೆ.
ಮೀನುಗಾರಿಕ ಸಚಿವ  ವೆಂಕಟೇಶ್ ನಾಡಗೌಡ  ಮಾರುಕಟ್ಟೆಗೆ ಭೇಟಿ ನೀಡಿದ್ರು. ಇದೇ ಸಂದರ್ಭ ಮೀನುಗಾರರ ಮಹಿಳೆಯರು ಸಚಿವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದ್ರು. ಮೀನುಗಾರ ಮಹಿಳೆಯರೊಂದಿಗೆ ಮಾತಿಕತೆ ನಡೆಸಿದ ಸಚಿವರು ಎಲ್ಲಾ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ್ರು.

ಇನ್ನು ಮಾರುಕಟ್ಟೆಯ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ವಿಚಾರವಾಗಿ ಮಾಹಿತಿ ನೀಡಿ ಸಚಿವರು ಮಾತನಾಡಿದ್ರು, ಮಹಿಳಾ ಮೀನುಗಾರರ ಬೇಡಿಕೆಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಗಾಗಲೇ ಸರಕಾರ ಈಡೇರಿಸಲು ಆದೇಶ ಹೊರಡಿಸಿದೆ. ಮಹಿಳಾ ಮೀನುಗಾರರು  60 ವರ್ಷ ಮೇಲ್ಪಟ್ಟ ಹಿರಿಯರಿಗೆ ಒಂದು ಸಾವಿರ ಪಿಂಚಣಿ ಯೋಜನೆ ನೀಡಬೇಕು ಎಂಬ ಆಗ್ರಹ ಮಾಡಿದ್ದು  ಇಗಾಗಲೇ ಸರಕಾರ ಪಿಂಚಣೆ ಯೋಜನೆಯ ಬೇಡಿಕೆಯನ್ನು ಈಡೇರಿಸಿದೆ.

ಮಹಿಳಾ ಮೀನುಗಾರರ ಸಾಲ ಮನ್ನಾ ಹಾಗೂ  50 ಸಾವಿರ ಬಡ್ಡಿ ರಹಿತ  ಸಾಲ ಸೌಲಭ್ಯ, ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿರಿಸಿದ್ದಾರೆ. ಇವರ ಎಲ್ಲಾ  ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದ್ರು. ಉಡುಪಿ ಶಾಸಕ ರಘುಪತಿ ಭಟ್ , ಜೆಡಿ ಎಸ್ ಜಿಲ್ಲಾದ್ಯಕ್ಷ ಯೋಗಿಶ್ ಶೆಟ್ಟಿ ಹಾಗೂ ಜೆಡಿ ಎಸ್ ಪಕ್ಷದ ಪ್ರಮುಖ ನಾಯಕರು ಇದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಮಲ್ಲಿಕಾರ್ಜುನ ಖರ್ಗೆ ಮೇಲೆ ರಾಹುಲ್ ಗಾಂಧಿಗೆ ಎಂಥಾ ಪ್ರೀತಿ, ಸಂಸತ್ ನಲ್ಲೇ ಭುಜಕ್ಕೆ ಮಸಾಜ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಶಬರಿಮಲೆಗೆ ಹೋಗುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ video

ಸೈಡಿಗೆ ಹೋಗೋ.. ನೀರಾಟಕ್ಕೆ ಅಡ್ಡಿಪಡಿಸಿದ್ದಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಆನೆ ಮಾಡಿದ್ದೇನು

ಮುಂದಿನ ಸುದ್ದಿ
Show comments