Select Your Language

Notifications

webdunia
webdunia
webdunia
webdunia

2 ವಿಧೇಯಕ ವಾಪಾಸ್ ಪಡೆಯಲು ಸರ್ಕಾರ ನಿರ್ಧಾರ

2 ವಿಧೇಯಕ ವಾಪಾಸ್ ಪಡೆಯಲು ಸರ್ಕಾರ ನಿರ್ಧಾರ
ಬೆಳಗಾವಿ , ಶನಿವಾರ, 20 ಡಿಸೆಂಬರ್ 2014 (13:14 IST)
ಇಂದು ನಡೆಯುವ ವಿಧಾನಸಭಾ ಕಲಾಪದಲ್ಲಿ ಅಂಗೀಕರಿಸಲು ಸಭಾಧ್ಯಕ್ಷರಿಗೆ ಸಲ್ಲಿಸಿದ್ದ ವಿಧೇಯಕಗಳಲ್ಲಿ 2 ವಿಧೇಯಕಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದ್ದು, ಇಂದು ಹಿಂಪಡೆಯಲಿದೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. 
 
ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ವಿಧೇಯಕ-2010 ಹಾಗೂ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ವಿಧೇಯಕ-2012ನ್ನು ಸರ್ಕಾರ ಹಿಂಪಡೆಯಲಿದೆ ಎಂದು ತಿಳಿದು ಬಂದಿದೆ. 
 
ವಿಧೇಯಕಕ್ಕೆ ಸಂಬಂಧಿಸಿದಂತೆ ಕೆಲ ಮೌಲ್ಯಮಾಪನಗಳನ್ನು ನಡೆಸುವ ಅಗತ್ಯವಿದ್ದು, ಪುನರ್ ವಿಮರ್ಶೆಗೊಳಪಡಿಸುವ ಅಗತ್ಯವಿದೆ ಎಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. 

Share this Story:

Follow Webdunia kannada