Webdunia - Bharat's app for daily news and videos

Install App

ಶೀಘ್ರದಲ್ಲೇ ಬರಲಿದೆ ಗೂಗಲ್ ಸಿಗ್ನಲ್ ....!!! ಏನಿದರ ವಿಶೇಷ ..!!!

Webdunia
ಗುರುವಾರ, 28 ಜುಲೈ 2022 (15:02 IST)
ಗೂಗಲ್‌ ಕಂಪನಿಯು ನಗರದ ಸಂಚಾರ ಪೊಲೀಸರ ಸಹಕಾರದಲ್ಲಿ ಕತ್ರಿಗುಪ್ಪೆ ವೃತ್ತದಲ್ಲಿ ವಾಹನ ದಟ್ಟಣೆ ಅಧ್ಯಯನ ಮಾಡಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಿಗ್ನಲ್‌ಲೈಟ್‌ನಲ್ಲಿ ಹಸಿರು, ಕೆಂಪು ದೀಪಗಳು ಹೊತ್ತುವ ಸಮಯ ನಿಗದಿಪಡಿಸಲು ಕತ್ರಿಗುಪ್ಪೆ ವೃತ್ತದಲ್ಲಿ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ತಂದಿತ್ತು.
 
ಯಶಸ್ವಿಯಾಗಿದ್ದು, ಇತರೆ ವೃತ್ತಗಳಲ್ಲೂ ಈ ಯೋಜನೆ ಜಾರಿಗೊಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
 
ಈ ವೃತ್ತದಲ್ಲಿ ವಾಹನ ದಟ್ಟಣೆಯ ಸ್ಥಿತಿಯನ್ನು ಗೂಗಲ್‌ ಸಂಸ್ಥೆಯು ಉಪಗ್ರಹದ ಮೂಲಕ ಅಧ್ಯಯನ ನಡೆಸಿ, ಸಿಗ್ನಲ್‌ಲೈಟ್‌ ಸಮಯವನ್ನು ಮರು ನಿಗದಿಪಡಿಸಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ.
 
ಚಾಲಕರಿಗೆ ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗುತ್ತಿದೆ.ವಿಶ್ವದಲ್ಲಿ ನಾಲ್ಕು ಪ್ರಮುಖ ನಗರಗಳು ಈ ಪ್ರಾಯೋಗಿಕ ಯೋಜನೆಗೆ ಆಯ್ಕೆಯಾಗಿದ್ದವು. ಬೆಂಗಳೂರು ಕೂಡ ಆಯ್ಕೆಯಾಗಿತ್ತು. ನಾಲ್ಕು ತಿಂಗಳ ಹಿಂದೆ ಗೂಗಲ್‌, ಕತ್ರಿಗುಪ್ಪೆ ವೃತ್ತದ ವಾಹನ ದಟ್ಟಣೆ ಅಂಕಿಅಂಶ ಅಧ್ಯಯನ ಆರಂಭಿಸಿತ್ತು. ಆಯಾ ವೃತ್ತಗಳ ವಾಹನ ದಟ್ಟಣೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಸಮಯ ನಿಗದಿ ಮಾಡುವುದರಿಂದ ಪರಿಹಾರ ಸಿಗಲಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ನಗರದಲ್ಲಿ 14 ಸಾವಿರ ಕಿ.ಮೀ ಪ್ರಮುಖ ರಸ್ತೆ, 44 ಸಾವಿರ ಜಂಕ್ಷನ್‌ ಗಳು, ಒಂದು ಸಾವಿರ ಪ್ರಮುಖ ವೃತ್ತ, 398 ವೃತ್ತದಲ್ಲಿ ಸಿಗ್ನಲ್‌ಲೈಟ್‌ಗಳಲ್ಲಿ ಪೊಲೀಸರು ಟ್ರಾಫಿಕ್‌ ನಿಯಂತ್ರಿಸಬೇಕಿದೆ. ಸಂಚಾರ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ತಂತ್ರಜ್ಞಾನ ಅವಳಡಿಕೆ
ಮಾಡಿಕೊಳ್ಳುತ್ತಲೇ ಇದೆ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದೇವೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರಿಗರೇ ಇಂದಿನ ಹವಾಮಾನದ ಬಗ್ಗೆ ಎಚ್ಚರ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಮುಂದಿನ ಸುದ್ದಿ
Show comments