ಬೆಂಗಳೂರಿನಲ್ಲಿ ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್ ಸಿಗಲಿದೆ . ಹೌದು ದಿನವಿಡೀ ಪಾರ್ಕ್ ಓಪನ್ ಇಡಲು ಪಾಲಿಕೆ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ನಾನಾಕಾರಣಗಳಿಂದ ದಿನದಲ್ಲಿ ಕೆಲ ಸಮಯ ಮಾತ್ರ ಪಾರ್ಕ್ ಓಪನ್ ಮಾಡಲಾಗುತ್ತಿದೆ. ಈ ನಿಯಮ ಬದಲಾವಣೆಗೆ ಪಾಲಿಕೆ ಚಿಂತನೆ ಮಾಡಿದೆ. ಈ ಹಿಂದಿನಿಂದಲೂ ಪಾರ್ಕ್ ಓಪನ್ ಇಡಲು ಜನರು ಬೇಡಿಕೆ ಸಲ್ಲಿಸಿದ್ರು ಆದ್ರೆ ಪಾಲಿಕೆ ತನ್ನದೇ ಕೆಲ ಕಾರಣ ಕೊಟ್ಟು ದಿನದ ಕೆಲ ಸಮಯ ಮಾತ್ರ ಸೀಮಿತಗೊಳಿಸಿತ್ತು. ಸದ್ಯ ಈಬಗ್ಗೆ ಪುನರ್ ಪರಿಶೀಲಿಸಿ ಹೊಸ ಆದೇಶ ಮಾಡಲು ಹೊರಟಿರೋ ಪಾಲಿಕೆ ದಿನಪೂರ್ತಿ ಪಾರ್ಕ್ ಓಪನ್ ಇಡಲು ಪಾಲಿಕೆ ಚಿಂತನೆ ಮಾಡುತ್ತಿದೆ. ಸದ್ಯ ಈಬಗ್ಗೆ ಸಾಧಕ ಬಾಧಕದ ಬಗ್ಗೆ ಚರ್ಚಿಸುತ್ತಿರೋ ಪಾಲಿಕೆ ಯಾವಾಗ ಈ ನಿಯಮ ಜಾರಿಗೆ ಬರುತ್ತದೆಯೋ ಕಾದು ನೋಡಬೇಕಾಗಿದೆ.