ಹಾಸನ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತಿದ್ದು, ಈ ಸಂಬಂಧ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಲ್ಲರು ಸೇರಿಕೊಂಡು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹುತಾತ್ಮನಾಗಿ ಮಾಡಲು ಹೊರಟಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಪ್ರಕರಣದ ಬಗ್ಗೆ ಮಾತಾಡುವುದೇ ಬೇಡ, ಅದು ಒಂದು ಕಡೆಯಿಂದ ಶುರುವಾಗಿ ಮತ್ಯಾವುದೋ ಕಡೆಗೆ ಹೋಗುತ್ತದೆ. ಒಂದು ಪದ ಹೇಳಿದಾಗ ಅದಕ್ಕೆ ಮತ್ತೊಂದು ಸೇರಿಕೊಂಡು ಪ್ರಜ್ವಲ್ ರೇವಣ್ಣ ಅವರನ್ನು ಹುತಾತ್ಮ ಮಾಡಲು ಹೊರಟಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯಲ್ಲಿ ತಮ್ಮ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ, ಸಂತ್ರಸ್ತ ಮಹಿಳೆಯರ ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕಿದೆ, ಸರ್ಕಾರ ಅವರ ನೆರವಿಗೆ ಧಾವಿಸಿ ಅವರು ಅನುಭವಿಸುತ್ತಿರುವ ಮಾನಸಿಕ ತೊಳಲಾಟ ಮತ್ತು ಹಿಂಸೆಯಿಂದ ಮುಕ್ತರಾಗಿಸಬೇಕಿದೆ, ಚುನಾವಣೆಯ ಬಳಿಕ ತಾನು ರಾಜ್ಯದಾದ್ಯಂತ ಓಡಾಡಿ ಶೋಷಿತ ಮಹಿಳೆಯಯರ ಪರವಾಗಿ ಧ್ವನಿಯೆತ್ತುವುದಾಗಿ ಹೇಳಿದರು.