Webdunia - Bharat's app for daily news and videos

Install App

ಶಾಲೆಯ ದೈಹಿಕ ಶಿಕ್ಷಕನಿಂದ ಬಾಲಕಿ ಮೇಲೆ ಸತತ ಲೈಂಗಿಕ ದೌರ್ಜನ್ಯ

Webdunia
ಗುರುವಾರ, 18 ಫೆಬ್ರವರಿ 2016 (15:41 IST)
ಉತ್ತರ ಬೆಂಗಳೂರಿನ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ದೈಹಿಕ ಶಿಕ್ಷಕ ಕಳೆದ 9 ತಿಂಗಳಿಂದ ಪದೇ ಪದೇ ರೇಪ್ ಮಾಡಿದ ಘಟನೆ ವರದಿಯಾಗಿದೆ. ಭಯಭೀತಳಾದ ಬಾಲಕಿ ತನ್ನ ಸ್ನೇಹಿತೆಗೆ ಈ ವಿಷಯ ತಿಳಿಸಿದಾಗ ಸ್ನೇಹಿತೆ ಬಾಲಕಿಯ ತಂದೆ, ತಾಯಿಗಳಿಗೆ ವಿಷಯ ಮುಟ್ಟಿಸಿದಳು.
 
40 ವರ್ಷ ವಯಸ್ಸಿನ ಲಕ್ಷ್ಮಿಕಾಂತ್ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಶಾಲೆಯ ಆಡಳಿತಕ್ಕೆ ಸ್ನೇಹಿತೆ ಮಾಹಿತಿ ನೀಡಿದ ಬಳಿಕ ಲಕ್ಷ್ಮಿಕಾಂತ್‌‍ನನ್ನು ಕಳೆದ ವಾರ ಅಮಾನತುಗೊಳಿಸಲಾಯಿತು. ಮಂಗಳವಾರ ರಾತ್ರಿ ಜಾಲಹಳ್ಳಿಯ ಪೊಲೀಸರನ್ನು ಶಾಲೆಯ ಆಡಳಿತ ಸಂಪರ್ಕಿಸಿದಾಗ ಪೊಲೀಸರು ಎಫ್‌ಐಆರ್ ದಾಖಲು ಮಾಡಿ ಶಿಕ್ಷಕನಿಗಾಗಿ ಹುಡುಕಾಡಿದರು. ಆದರೆ ಅಷ್ಟರಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಶಿಕ್ಷಕ ಪರಾರಿಯಾಗಿದ್ದ.
 
ಬಾಲಕಿಯನ್ನು 2015ರ ಫೆಬ್ರವರಿಯಿಂದ ನವೆಂಬರ್‌ವರೆಗೆ ಪದೇ ಪದೇ ರೇಪ್ ಮಾಡಲಾಗಿದೆ ಎಂದು ಶಾಲೆಯ ದೂರಿನಲ್ಲಿ ತಿಳಿಸಲಾಗಿದ್ದು, ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿಲ್ಲ. ಲಕ್ಷ್ಮಿಕಾಂತ್ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಶಾಲೆಯ ಹೊರಗೆ ಕೂಡ ಅನೇಕ ಬಾರಿ ಬಾಲಕಿಯನ್ನು ಲಕ್ಷ್ಮಿಕಾಂತ್ ಭೇಟಿ ಮಾಡಿದ್ದ ಎಂದು ಉತ್ತರ ಡಿಸಿಪಿ ಟಿ.ಆರ್. ಸುರೇಶ್ ಹೇಳಿದ್ದಾರೆ.
 
ಈ ಘಟನೆ ಬೆಳಕಿಗೆ ಬಂದ ಬಳಿಕ ನಾವು ಪಿಇ ಶಿಕ್ಷಕನನ್ನು ತಕ್ಷಣಕ್ಕೆ ಜಾರಿಯಾಗುವಂತೆ ಅಮಾನತುಗೊಳಿಸಿದ್ದೇವೆ ಎಂದು ಶಾಲೆಯ ಅಧಿಕಾರಿ ತಿಳಿಸಿದರು.  ಪೊಲೀಸರು ಶಾಲೆಯಿಂದ ಮತ್ತು ಸಂತ್ರಸ್ತೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿದ್ದು, ಪೊಲೀಸರ ತಂಡವೊಂದು ಶಿಕ್ಷಕನ ಜಾಡನ್ನು ಪತ್ತೆ ಮಾಡಲು ಯತ್ನಿಸುತ್ತಿದೆ. ಮೂಲತಃ ಶಿವಮೊಗ್ಗದವರಾದ ಶಿಕ್ಷಕ ಟುಟೋರಿಯಲ್ ತರಗತಿ ನಡೆಸುತ್ತಿದ್ದ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ