Select Your Language

Notifications

webdunia
webdunia
webdunia
webdunia

ಡ್ರಾಪ್ ನೆಪದಲ್ಲಿ ಅಪ್ರಾಪ್ತೆ ಮೇಲೆ ವಿದೇಶಿಗರಿಂದ ಅತ್ಯಾಚಾರ

ಡ್ರಾಪ್ ನೆಪದಲ್ಲಿ ಅಪ್ರಾಪ್ತೆ ಮೇಲೆ ವಿದೇಶಿಗರಿಂದ ಅತ್ಯಾಚಾರ
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2016 (10:27 IST)
ಡ್ರಾಪ್ ಕೊಡುವ ನೆಪದಲ್ಲಿ ಇಬ್ಬರು ವಿದೇಶಿ ಯುವಕರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
 
ಕೆ. ಆರ್ ಪುರಂ ವ್ಯಾಪ್ತಿಯಲ್ಲಿ ಅಕ್ಟೋಬರ್ 19ರ ಸಂಜೆ ಈ ದುರ್ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ಆರೋಪಿಗಳನ್ನು ಅಪ್ಘಾನಿಸ್ತಾನ ಮೂಲದ ಮುಸ್ತಫಾ ಜಲಾಲ್ ಮತ್ತು ಇರಾಕ್ ಮೂಲದ ಕರಮ್ ಅಬ್ದುಲ್ ಅಹಮದ್ ಎಂದು ಗುರುತಿಸಲಾಗಿದ್ದು ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
 
ಅಕ್ಟೋಬರ್ 19ರ ಸಂಜೆ ಬಾಲಕಿ ತನ್ನ ಸ್ನೇಹಿತೆಯ ಮನೆಯಿಂದ ತನ್ನ ಮನೆ ಕಡೆ ಹೋಗುತ್ತಿದ್ದಾಗ ಕಾರ್ ನಿಲ್ಲಿಸಿದ ಇಬ್ಬರು ಯುವಕರು ಡ್ರಾಪ್ ಕೊಡುವುದಾಗಿ ಆಕೆಯನ್ನು ಕಾರ್‌ಗೆ ಹತ್ತಿಸಿಕೊಂಡಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
 
ಬಳಿಕ ಮನೆಗೆ ಹಿಂತಿರುಗಿದ ಬಾಲಕಿ ತನ್ನ ತಾಯಿ ಬಳಿ ಎಲ್ಲ ವಿಷಯವನ್ನು ಹೇಳಿ ಕೆ. ಆರ್. ಪುರಂ ಪೊಲೀಸ್ ಠಾಣೆಗೆ ದೂರಿ ನೀಡಿದ್ದಾರೆ. 
 
ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಕುಡಿದ ಮತ್ತಿನಲ್ಲಿ ಈ ದುಷ್ಕೃತ್ಯವನ್ನು ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ Vs ಶೆಟ್ಟರ್: ಇದು ಒಳ ರಾಜಕೀಯ...!