Select Your Language

Notifications

webdunia
webdunia
webdunia
webdunia

ಗಜೇಂದ್ರ ಪದಚ್ಯತಿಗೆ ಗಿರೀಶ್ ಕಾಸರವಳ್ಳಿ ಆಗ್ರಹ

ಗಜೇಂದ್ರ ಪದಚ್ಯತಿಗೆ ಗಿರೀಶ್ ಕಾಸರವಳ್ಳಿ ಆಗ್ರಹ
ಬೆಂಗಳೂರು , ಮಂಗಳವಾರ, 4 ಆಗಸ್ಟ್ 2015 (16:08 IST)
ಎಫ್‌ಟಿಐಐ(ಭಾರತೀಯ ಚನಚಿತ್ರ ಮತ್ತು ದೂರದರ್ಶನ ಸಂಸ್ಥೆ)ನ ಅಧ್ಯಕ್ಷ ಸ್ಥಾನದಿಂದ  ಗಜೇಂದ್ರ ಚೌವ್ಹಾಣ್ ಅವರನ್ನು ಕೆಳಗಿಳಿಸಬೇಕು ಎಂಬ ವಿದ್ಯಾರ್ಥಿಗಳ ಪ್ರತಿಭಟನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು, ಉದ್ಯಾನನಗರಿಯಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. 
 
ಎಫ್‌‌‌‌‌ಟಿಐಐನ ಹಳೇ ವಿದ್ಯಾರ್ಥಿಯಾಗಿರುವ ಕಾಸರವಳ್ಳಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೂಚನಾ ಫಲಕಗಳ ಮೇಲೆ ಘೋಷ ವಾಕ್ಯಗಳನ್ನು ಪಸರಿಸುವ ಮೂಲಕ ಗಜೇಂದ್ರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದರು.  
 
ಬಳಿಕ, ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಭಾರತೀಯ ಚಿತ್ರರಂಗದಲ್ಲಿ ಖ್ಯಾತ ಪರಿಣಿತರಿದ್ದಾರೆ. ಅಂತಹವರನ್ನು ಬಿಟ್ಟು, ಅನರ್ಹರೋರ್ವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. ಇದಕ್ಕೆ ಕಾರಣ ಗಜೇಂದ್ರ ಚೌವ್ಹಾಣ್ ಅವರು ಬಿಜೆಪಿಯ ಮುಖಂಡ ಎಂಬದು ಎಂದು ಆರೋಪಿಸಿದ ಅವರು, ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಮರ್ಥರನ್ನು ಆರಿಸಬೇಕು ಎಂದು ಆಗ್ರಹಿಸಿದರು. 
 
ಇನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಗಜೇಂದ್ರ ಅವರ ಬದಲಿಗೆ ಬೇರೆ ಪರಿಣಿತ ವ್ಯಕ್ತಿಗಳನ್ನು ಆರಿಸಬೇಕು ಎಂದು ಒತ್ತಾಯಿಸಿ ಕಳೆದ ಜೂನ್ 12ರಿಂದ ಎಫ್‌ಟಿಐಐನ ಪುಣೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಭಾಗವಹಿಸಿ ಸಾಥ್ ನೀಡಿದ್ದರು. 

Share this Story:

Follow Webdunia kannada