Webdunia - Bharat's app for daily news and videos

Install App

ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯ ವಿವರ ಇಲ್ಲಿದೆ

Krishnaveni K
ಮಂಗಳವಾರ, 14 ಜನವರಿ 2025 (09:14 IST)
Photo Credit: X
ಬೆಂಗಳೂರು: ಮಕರ ಸಂಕ್ರಾಂತಿಯ ದಿನದಂದು ಪ್ರತಿವರ್ಷದಂತೆ ಇಂದೂ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದ್ದು ಸಮಯ ಹಾಗೂ ಇತ್ಯಾದಿ ವಿವರ ಇಲ್ಲಿದೆ.

ಮಕರ ಸಂಕ್ರಾಂತಿಯ ದಿನದಿಂದ ಸೂರ್ಯ ತನ್ನ ಪಥ ಬದಲಿಸಿ ಸಂಚಾರ ಆರಂಭಿಸುತ್ತಾನೆ. ಬೆಂಗಳೂರಿನ ಗವಿಪುರಂನಲ್ಲಿರುವ ಪುರಾಣ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಸೂರ್ಯ ರಶ್ಮಿಯ ವಿಸ್ಮಯ ಸಂಭವಿಸಲಿದೆ.

ಸೂರ್ಯನು ಗುಹೆಯೊಳಗಿರುವ ದೇವಾಲಯದ ಕಿಂಡಿಯ ಮೂಲಕ ಹಾದು ಹೋಗಿ ಗವಿಗಂಗಾಧರನ ಪಾದ ಸ್ಪರ್ಶಿಸುತ್ತದೆ. ಬಳಿಕ ನಂದಿ ವಿಗ್ರಹದ ಮೂಲಕ ಶಿವಲಿಂಗವನ್ನು ಹಾದು ಹೋಗುತ್ತದೆ. ಈ ವಿಸ್ಮಯವನ್ನು ವೀಕ್ಷಿಸಲು ಪ್ರತೀ ವರ್ಷವೂ ಸಾಕಷ್ಟು ಜನ ದೇವಾಲಯಕ್ಕೆ ಬರುತ್ತಾರೆ.

ಇಂದು ಸಂಜೆ 5.14 ರಿಂದ 5.17 ರೊಳಗಾಗಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದವರೆಗೆ ಮಾತ್ರ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ಕಲ್ಪಿಸಲಾಗಿದೆ. ಸೂರ್ಯ ವಿಸ್ಮಯವನ್ನು ವೀಕ್ಷಿಸಲು ದೇವಾಲಯದ ಹೊರಗೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ಸೂರ್ಯ ರಶ್ಮಿ ಸ್ಪರ್ಶ ವೇಳೆ ದೇವರಿಗೆ ವಿಶೇಷ ಪೂಜೆ ನೆರವೇರುತ್ತದೆ.  ಸಂಜೆ 6 ರ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indus Water treaty: ಸಿಂಧೂ ನದಿ ಒಪ್ಪಂದ ಎಂದರೇನು, ಇದನ್ನ ಮಾಡಿದವರು ಯಾರು: ಪಾಕಿಸ್ತಾನಕ್ಕೆ ಆಗುವ ನಷ್ಟವೇನು

Pahalgram: ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಜುನಾಥ್‌, ಭರತ್ ಭೂಷಣ್‌ಗೆ ಅಂತ್ಯಕ್ರಿಯೆ

Pehlagam ಪ್ರವಾಸಿಗರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮುಸ್ಲಿಂ ಯುವಕ, ತಂದೆಯ ಮಾತು ಕೇಳಿದ್ರೆ ಮೈ ರೋಮಾಂಚನ

‌Pahalgam Terror Attack:ಸರ್ವಪಕ್ಷ ಸಭೆಗೂ ಮುನ್ನಾ ರಾಷ್ಟ್ರಪತಿಯನ್ನು ಭೇಟಿಯಾದ ಅಮಿತ್ ಶಾ

Pahalgam Terror Attack: ವಾಘಾ ಅಟ್ಟಾರಿ ಗಡಿ ಬಂದ್‌ನಿಂದ ಪಾಕ್‌ನ ಮೇಲೆ ಬೀರುವ ಪರಿಣಾಮಗಳು

ಮುಂದಿನ ಸುದ್ದಿ
Show comments