ಗೌರಿ ಲಂಕೇಶ್ ಹತ್ಯೆ ಶಾಕಿಂಗ್ ನ್ಯೂಸ್: ಸಿಎಂ ಸಿದ್ದರಾಮಯ್ಯ

Webdunia
ಮಂಗಳವಾರ, 5 ಸೆಪ್ಟಂಬರ್ 2017 (22:12 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಶಾಕಿಂಗ್ ನ್ಯೂಸ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆ ಬಗ್ಗೆ ಸಿಎಂ ಅತೀವ ದುಃಖ, ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತೆಯಾಗಿದ್ದರೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅನ್ಯಾಯವನ್ನ ಖಂಡಿಸುತ್ತಿದ್ದರು. ಹೋರಾಟ ನಡೆಸುತ್ತಿದ್ದರು. ನಕ್ಸಲರನ್ನ ಶರಣಾಗತಿ ಮಾಡಿಸಿ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಂದೆ ಲಂಕೆಶ್ ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯನ್ನ ಮುಂದುವರೆಸಿಕೊಂಡು ಬಂದಿದ್ದರು ಎಂದು ಸಿಎಂ ಹೇಳಿದ್ದಾರೆ.

ಹಲವು ಬಾರಿ ಗೌರಿ ಲಂಕೇಶ್ ನನ್ನನ್ನ ಭೇಟಿ ಮಾಡಿದ್ದರು. ಆದರೆ, ಬೆದರಿಕೆ ಇರುವ ಬಗ್ಗೆಯಾಗಲಿ, ಭದ್ರತೆ ನೀಡುವ ಬಗ್ಗೆಯಾಗಲಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಭದ್ರತೆ ಕೇಳಿದ್ದರೆ ಸರ್ಕಾರ ಖಂಡಿತಾ ಭದ್ರತೆ ನೀಡುತ್ತಿತ್ತು. ಗೌರಿ ಲಂಕೇಶ್ ಹತ್ಯೆ ತನಿಖೆಗೆ ಪೊಲೀಸರು 3 ತಂಡಗಳನ್ನ ರಚಿಸಿದ್ದಾರೆ. ತೀವ್ರಗತಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೇರೆ ಯಾರೇ ಏನೇ ಮಾತನಾಡಿದರೂ ಕಿಮ್ಮತ್ತಿಲ್ಲ: ಸಿಎಂ ಸಿದ್ದರಾಮಯ್ಯ ಗರಂ

ಜೀವ ಉಳಿಸಿದ, ಸಂತೋಷ ಕಿತ್ತುಕೊಂಡ: ಅಹಮದಾಬಾದ್ ವಿಮಾನ ದುರಂತದ ಲಕ್ಕಿ ಮ್ಯಾನ್‌ನ ನೋವಿನ ಮಾತು

ಆರೈಕೆಗೆಂದು ಕೆಲಸಕ್ಕಿಟ್ಟವಳಿಂದಲೇ ನಾಯಿ ಫಿನೀಶ್‌, ಭೀಕರ ದೃಶ್ಯ ಸೆರೆ

ಸುಳೇಗಾಳಿ ಗ್ರಾಮದಲ್ಲಿ ಎರಡು ಆನೆ ಸಾವು, ಸಚಿವ ಈಶ್ವರ್ ಖಂಡ್ರೆ ಕೊಟ್ರು ಖಡಕ್ ವಾರ್ನಿಂಗ್‌

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments