Select Your Language

Notifications

webdunia
webdunia
webdunia
webdunia

ಗ್ಯಾಸ್ ಸ್ಫೋಟ ಪ್ರಕರಣ: ಮಹಿಳೆ ಸಾವು

ಗ್ಯಾಸ್ ಸ್ಫೋಟ ಪ್ರಕರಣ: ಮಹಿಳೆ ಸಾವು
ಉತ್ತರ ಕನ್ನಡ , ಮಂಗಳವಾರ, 1 ಸೆಪ್ಟಂಬರ್ 2015 (12:31 IST)
ಇಂದು ಬೆಳಗ್ಗೆ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಬಳಿ ಗ್ಯಾಸ್ ಟ್ಯಾಂಕರ್‌ವೊಂದು ಸ್ಫೋಟಗೊಂಡ ಪರಿಣಾಮ ಗಾಯಗೊಂಡಿದ್ದ 13 ಮಂದಿಯಲ್ಲಿ ಮಹಿಳೆಯೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಭಟ್ಕಳ ತಾಲೂಕು ಉಪವಿಭಾಗಾಧಿಕಾರಿ ಚಿಂದಾನಂದ ಅವರು ಮಾಹಿತಿ ನೀಡಿದ್ದಾರೆ.  
 
ಹೌದು, ಇಂದು ಬೆಳಗ್ಗೆ ಸರಿ ಸುಮಾರು 6 ಗಂಟೆ ವೇಳೆಯಲ್ಲಿ ಚಲಿಸುತ್ತಿದ್ದ ಅನಿಲ ಟ್ಯಾಂಕರ್ ವೊಂದು ಪಲ್ಟಿ ಹೊಡೆದು ಸ್ಫೋಟಗೊಂಡಿತ್ತು. ಪರಿಣಾಮ 10ಕ್ಕೂ ಹೆಚ್ಚು ಮನೆಗಳು ಬೆಂಕಿಗೀಡಾಗಿದ್ದವು. ಈ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ 13 ಮಂದಿ ಗಾಯಗೊಂಡಿದ್ದರು. ಇವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿತ್ತು. ಈ ಆರು ಮಂದಿಯಲ್ಲಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. 
 
ಈ ಸಂಬಂಧ ಕುಮಟಾ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada