Select Your Language

Notifications

webdunia
webdunia
webdunia
webdunia

ಉದ್ಯಾನ ನಗರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಉದ್ಯಾನ ನಗರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ಬೆಂಗಳೂರು , ಸೋಮವಾರ, 26 ಜನವರಿ 2015 (12:42 IST)
ನಗರದಲ್ಲಿ ಇಂದು ಗಣರಾಜ್ಯೋತ್ಸವದ ಸಂಭ್ರಮ. ಮಾಣಿಕ್ ಷಾ ಮೈದಾನದಲ್ಲಿ ಆಯೋಜಿಸಲಾಗಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಧ್ವಜಾರೋಹಣ ಮಾಡಿದ್ದು, ಗೌರವ ವಂದನೆ ಸ್ವೀಕರಿಸಿದ್ದಾರೆ.
 
ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು, ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎನ್ನುವ ಮೂಲಕ ಕರ್ನಾಟಕದ ಜನತೆಗೆ ಗಣತಂತ್ರದ ಶುಭಾಶಯ ಕೋರಿದ್ದಾರೆ.  ಗಾಂಧೀಜಿ, ವಿವೇಕಾನಂದರು ದೇಶಕ್ಕಾಗಿ ಶ್ರಮಿಸಿದಂತವರು. ಇಂತಹ ಹಿರಿಯರ ಹಾದಿಯಲ್ಲಿ ನಾವು ಸಾಗಿ, ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ.
 
ರಾಜ್ಯದಲ್ಲೂ ಗಣನೀಯ ಪ್ರಗತಿಯಾಗಿದೆ. ನಮ್ಮ ರೈತರು ಉತ್ಪಾದನೆ ಕ್ಷೇತ್ರದಲ್ಲಿ ರಾಷ್ಟ್ರವನ್ನು ಸ್ವಾಲಂಭಿಯಾಗಿಸಿದ್ದಾರೆ.
 
ಅನೇಕತೆಯಲ್ಲಿ ಏಕತೆ ಕಂಡ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ಕೇವಲ ನಿಷ್ಪಕ್ಷಪಾತ ಚುನಾವಣೆ ಅಲ್ಲ. ಒಳ್ಳೆಯ, ಪ್ರಗತಿಪರ ಆಡಳಿತ, ಎಲ್ಲರನ್ನೊಳಗೊಂಡ ಆಡಳಿತವಾಗಿದೆ. ವಿಜ್ಞಾನ ತಂತ್ರಜ್ಞಾನ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಅಭಿವೃದ್ಧಿ ಹೊಂದಿದೆ. ಭಾರತ ಅನೇಕತೆಯಲ್ಲಿ ಏಕತೆ ಪರಿಪಾಲಿಸುತ್ತಿರುವ ರಾಷ್ಟ್ರ. ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
 
ಸ್ವಾತಂತ್ರ್ಯ ಬಳಿಕ ನಾವು ಅಭಿವೃದ್ಧಿಯತ್ತ ಮುನ್ನಡೆದಿದ್ದೇವೆ. ನಾವು ಆರ್ಥಿಕ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನೆಡೆದಿದ್ದೇವೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದ್ದಾರೆ. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
 
ರಾಜ್ಯ ಹಾಗೂ ದೇಶದಲ್ಲಿ ಒಳ್ಳೆಯ ಆಡಳಿತಕ್ಕಾಗಿ ಶ್ರಮಿಸೋಣ. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕು. ಆತಂಕವಾದ ತೊಲಗಿಸಲು ಸಮರ್ಥ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಪ್ರಗತಿಯ ಹಾದಿಯಲ್ಲಿ ಸಾಗಲು ನಾವೆಲ್ಲ ಕೈಜೋಡಿಸಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದ್ದಾರೆ.
 

Share this Story:

Follow Webdunia kannada