Webdunia - Bharat's app for daily news and videos

Install App

ಮಾರುಕಟ್ಟೆ ಸೇರಿದಂತೆ ನಗರದ ಹಲವೆಡೆ ರಾಶಿ ರಾಶಿ ಕಸ

Webdunia
ಗುರುವಾರ, 6 ಅಕ್ಟೋಬರ್ 2022 (20:24 IST)
ದಸರಾ ಹಬ್ಬದ ಸಡಗರದಲ್ಲಿ ಮಿಂದೆದ್ದ ಬೆಂಗಳೂರು ನಗರದಲ್ಲಿ ಈಗ ಕಸದ ಗುಡ್ಡೆ ನಿರ್ಮಾಣವಾಗಿದ್ದು, ಬಾಳೆದಿಂಡು, ಪೂಜಾ ಸಾಮಗ್ರಿಗಳು ರಸ್ತೆಯ ಅಕ್ಕಪಕ್ಕ ರಾಶಿ ರಾಶಿ ಬಿದ್ದಿದೆ.ಮಲ್ಲೇಶ್ವರ, ಶಾಂತಿನಗರ, ಆರ್.ಟಿ.ನಗರ, ಬಸವನಗುಡಿ, ವಿಜಯನಗರ, ಮಡಿವಾಳ, ಬಿಟಿಎಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆಗಳಲ್ಲಿ  ಪೂಜೆಗೆ ಬಳಸಿದ ವಸ್ತುಗಳು ರಸ್ತೆಪಕ್ಕದಲ್ಲಿ ಎಲ್ಲೆಂದರಲ್ಲಿ ಬಿದ್ದಿದೆ.ಸಾಮಾನ್ಯ ದಿನಗಳಲ್ಲಿ  ನಿತ್ಯ ಸುಮಾರು ನಾಲ್ಕು ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕಳೆದೆರಡು ದಿನಗಳಿಂದ ಸುಮಾರು 6,500 ಟನ್ ತ್ಯಾಜ್ಯ ನಗರದಲ್ಲಿ ಸೃಷ್ಟಿಯಾಗಿದೆ.
 
ಈಗ ಸುಮಾರು ಎರಡೂವರೆ ಸಾವಿರ ಟನ್ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹಬ್ಬದ ಹಿನ್ನೆಲೆಯಲ್ಲಿ ಪಾಲಿಕೆ ಕಸದ ಟಿಪ್ಪರ್‍ಗಳು ಹಾಗೂ ಕ್ಯಾಂಪ್ಯಾಕ್ಟರ್‍ಗಳನ್ನು ಚಾಲಕರು ಸ್ವಚ್ಛಗೊಳಿಸಿ ಪೂಜೆ ಮಾಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ ಸಾಧ್ಯವಾಗಿಲ್ಲ.ಮಾರುಕಟ್ಟೆ ಪ್ರದೇಶಗಳು, ಪಾದಚಾರಿ ಮಾರ್ಗಗಳು, ಮೈದಾನದ ಮೂಲೆಗಳು, ಖಾಲಿ ನಿವೇಶನಗಳು ಸೇರಿದಂತೆ ಹಲವೆಡೆ ರಾಶಿಗಟ್ಟಲೇ ಕಸ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಂದ ಮಾವಿನ ಎಲೆ, ಬಾಳೆಕಂದು,ಬೂದುಕುಂಬಳಕಾಯಿ, ಹೂವು ಸೇರಿದಂತೆ ಇತರೆ ವಸ್ತುಗಳನ್ನು ನಗರಕ್ಕೆ ತಂದು ಮಾರಾಟ ಮಾಡಿದರು. ಇದರಿಂದ ಎಲ್ಲ ಮಾರುಕಟ್ಟೆ ಸ್ಥಳಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು.ಹೀಗಾಗಿ ಆ ಪ್ರದೇಶಗಳಲ್ಲಿ ಹೆಚ್ಚಿನ ತ್ಯಾಜ್ಯ ಇದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments