Select Your Language

Notifications

webdunia
webdunia
webdunia
webdunia

ಗ್ಯಾಂಗ್ ರೇಪ್ ಪ್ರಕರಣ: ಕೋರ್ಟ್‌ನಲ್ಲಿಂದು ಆರೋಪಿಗಳ ವಿಚಾರಣೆ

ಗ್ಯಾಂಗ್ ರೇಪ್ ಪ್ರಕರಣ: ಕೋರ್ಟ್‌ನಲ್ಲಿಂದು ಆರೋಪಿಗಳ ವಿಚಾರಣೆ
ಬೆಂಗಳೂರು , ಬುಧವಾರ, 7 ಅಕ್ಟೋಬರ್ 2015 (09:38 IST)
ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆ ಇದೆ.

ಆರೋಪಿಗಳಾದ ಸುನೀಲ್(23) ಮತ್ತು ಯೋಗೇಶ್  (27) ಅವರನ್ನು ವೈದ್ಯಕೀಯ ಪರೀಕ್ಷೆ ಮತ್ತು ರಕ್ತ ಪರೀಕ್ಷೆಗೊಳಪಡಿಸಿದ ಬಳಿಕ ಪೊಲೀಸರು 6ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. 
 
ಆರೋಪಿಗಳನ್ನು 10 ದಿನಗಳ ಕಾಲ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಆರೋಪಿಗಳಿಬ್ಬರು ಹತ್ತಿರದ ಸಂಬಂಧಿಗಳಾಗಿದ್ದು ಚಿಕ್ಕಮಗಳೂರಿನ ಕಡೂರು ಮೂಲದವರಾಗಿದ್ದಾರೆ. ಮದ್ಯದ ಅಮಲಿನಲ್ಲಿದ್ದ ದುಷ್ಕರ್ವಿುಗಳಿಬ್ಬರು ಶನಿವಾರ ರಾತ್ರಿ ಮಧ್ಯಪ್ರದೇಶ ಮೂಲದ 23 ವರ್ಷದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟೆಂಪೊ ಟ್ರಾವೆಲರ್​ನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿದ್ದರು. 

Share this Story:

Follow Webdunia kannada