Daily Horoscope
✕

ಧಗಧಗನೇ ಹೊತ್ತಿ ಉರಿದ ಬಸ್!

Webdunia
ಮಂಗಳವಾರ, 23 ನವೆಂಬರ್ 2021 (15:49 IST)
ಪ್ರವಾಸಿ ಬಸ್ವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ 12 ಮಕ್ಕಳು ಸೇರಿ 45 ಮಂದಿ ದುರ್ಮರಣಕ್ಕೀಡಾದ ಘಟನೆ ಬಲ್ಗೇರಿಯಾ ಪ್ರದೇಶದ ಪಶ್ಚಿಮದಲ್ಲಿರುವ ಹೆದ್ದಾರಿಯಲ್ಲಿ ನಡೆದಿದೆ.
ಈ ಬಸ್ನಲ್ಲಿದ್ದವರೆಲ್ಲ ಉತ್ತರ ಮೆಸೆಡೋನಿಯನ್ ಪ್ರವಾಸಿಗರೇ ಆಗಿದ್ದರು ಎಂದು ವರದಿಯಾಗಿದೆ. ಬಲ್ಕನ್ ದೇಶಗಳ ಇತಿಹಾಸದಲ್ಲಿಯೇ ಇದು ಭಯಂಕರವಾದ ಅಪಘಾತ ಎಂದೂ ಹೇಳಲಾಗಿದೆ.  ಇನ್ನು ಗಾಯಗೊಂಡ ಏಳುಮಂದಿಯನ್ನು ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಆಂತರಿಕ ಸಚಿವಾಲಯದ ಸಚಿವ ಬಾಯ್ಕೊ ರಾಶ್ಕೋವ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಬಸ್ನೊಳಗೆ ಗುಂಪುಗುಂಪಾಗಿ ಸುಟ್ಟು ಬೂದಿಯಾಗಿದ್ದಾರೆ ಎಂದಿದ್ದಾರೆ. ವೈರಲ್ ಆದ ವಿಡಿಯೋಗಳು ನೋಡಲು ಸಾಧ್ಯವಿಲ್ಲದಷ್ಟು ಭಯಾನಕವಾಗಿವೆ. ಇಂಥ ಸನ್ನಿವೇಶವನ್ನು ನಾನು ಮೊದಲೆಂದೂ ನೋಡಿಯೇ ಇರಲಿಲ್ಲ ಎಂದೂ ತಿಳಿಸಿದ್ದಾರೆ.  ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಬಸ್ ಹೆದ್ದಾರಿಯ ಬ್ಯಾರಿಯರ್ (ಬೇಲಿ)ಗೆ ಡಿಕ್ಕಿ ಹೊಡೆದು ನಿಂತಿದೆ. ಬೆಂಕಿ ಹೊತ್ತಿ ಉರಿಯಲು ಪ್ರಾರಂಭವಾದ ಬಳಿಕ ಹೀಗಾಯಿತೋ, ಅಥವಾ ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತೋ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments