ಇಂದಿನಿಂದ ಜನವರಿ 9ರವರೆಗೆ ಅವರೆಬೇಳೆ ಮೇಳದ ಕಂಪು

Webdunia
ಗುರುವಾರ, 5 ಜನವರಿ 2023 (19:20 IST)
ಸಿಕ್ಕಾಪಟ್ಟೆ ಚಳಿ. ಕಾಫಿ , ಟೀ ಕುಡ್ದು ಕುಡ್ದು ಸಾಕಾಗಿದೆ ಅಂಥ ಅನಿಸಿದ್ರೆ ಒಮ್ಮೆ ಬಸವನಗುಡಿ ನ್ಯಾಷನಲ್ ಗ್ರೌಂಡ್ ಗೆ ಹೋಗಿ ಬನ್ನಿ .ಯಾಕೆಂದ್ರೆ ಇವತ್ತಿಂದ ಜನವರಿ 9ರವೆರೆಗೆ ಅಲ್ಲಿ ಬಗೆ ಬಗೆಯ ಅವರೆಬೇಳೆ ತಿಂಡಿಗಳು ನಿಮ್ಮ ನಾಲಿಗೆಗೆ ರುಚಿ ನೀಡೋಕೆ ಸಿದ್ಧವಾಗಿವೆ. ವಾಸವಿ ಕಾಂಡಿಮೆಂಟ್ಸ್ನಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಅವರೆಬೇಳೆ ಮೇಳ ಆಯೋಜಿಸಿದ್ದು, ಅವರೆಬೇಳೆ ತಿಂಡಿಗಳು ಘಮಘಮಿಸುತ್ತಿವೆ.
ಇವತ್ತಿನಿಂದ ನಡೆಯುತ್ತಿರೋ ಈ ಮೇಳಕ್ಕೆ ಸಾದಾಸೀದಾ ಗುಣದಿಂದಲೇ ಸದ್ದುಮಾಡಿರೋ ಇನ್ಫೋಸಿಸ್ ಸುಧಾಮೂರ್ತಿ ಚಾಲನೆ ನೀಡಿದ್ರು. ಅವರೆಬೇಳೆಯ ತಿಂಡಿಗಳ ರುಚಿ ಸವಿದ ಸುಧಾಮೂರ್ತಿ, ಮೇಳದಲ್ಲಿ ರೌಂಡ್ ಹಾಕಿ ಅವರೆಬೇಳೆಯ ಖಾದ್ಯಗಳನ್ನ ಕಣ್ತುಂಬಿಕೊಂಡ್ರು. ಇತ್ತ ಸುಧಾಮೂರ್ತಿಯವರಿಗೆ ನಟಿ ತಾರಾ ಅನುರಾಧ, ಸಿಹಿಕಹಿ ಚಂದ್ರು, ಭಾಸ್ಕರ್ರಾವ್ ಸೇರಿದಂತೆ ಹಲವರು ಸಾಥ್ ನೀಡಿದ್ರು. ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸುಧಾಮೂರ್ತಿ, ನಮ್ಮ ರಾಜ್ಯದ ಒಂದು ಬೆಳೆಯಿಂದ ಇಷ್ಟು ಖಾದ್ಯ ಮಾಡಬಹುದು ಅಂತ ಗೊತ್ತಿರಲಿಲ್ಲ . ರೈತರ ಶ್ರಮವನ್ನು ಉತ್ತೇಜಿಸಬೇಕು ಅಂದ್ರು .ಇನ್ನು ಮೇಳದಲ್ಲಿ ಅನ್ನದಾತ ರೈತರಿಗೆ ಸನ್ಮಾನ ಮಾಡುವ ಮೂಲಕ ಅವರೆಬೇಳೆ ಬೆಳೆಯಲು ಪ್ರೋತ್ಸಾಹವನ್ನ ಕೂಡ ನೀಡಲಾಯ್ತು. ಇನ್ನು ಕಾರ್ಯಕ್ರಮದ ಆಯೋಜಕರೂ ಕೂಡ ಅವರೆಬೇಳೆ ಮೇಳದ ಬಗ್ಗೆ ಮಾತನಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ದಿಢೀರನೇ ತುಮಕೂರು ಪ್ರವಾಸವನ್ನು ರದ್ದು ಮಾಡಿದ ಸಿಎಂ, ಇದೇ ಕಾರಣ

ಮುಂದಿನ ಸುದ್ದಿ
Show comments