Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯ ಯೋಧ ಅನಂತ ಶರ್ಮಾ ವಿಧಿವಶ

ಸ್ವಾತಂತ್ರ್ಯ ಯೋಧ ಅನಂತ ಶರ್ಮಾ ವಿಧಿವಶ
ಕಲಬುರಗಿ , ಶುಕ್ರವಾರ, 12 ಫೆಬ್ರವರಿ 2016 (09:12 IST)
ಸ್ವಾತಂತ್ರ್ಯ ಹೋರಾಟಗಾರ, ಜನಸಂಘ ಮತ್ತು ಬಿಜೆಪಿ ಹಿರಿಯ ನಾಯಕ ಅನಂತ ಶರ್ಮಾ ಪುರಾಣಿ ಗುರುವಾರ ನಮ್ಮನ್ನು ಅಗಲಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 

1927ರಲ್ಲಿ ಜನಿಸಿದ್ದ ಶರ್ಮಾ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಶರ್ಮಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಹ ಗುರುತಿಸಿಕೊಂಡಿದ್ದರು. 
 
ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ ಅವರು ನಿಜಾಮ ಸರ್ಕಾರದ ವಿರುದ್ಧ ಹೋರಾಡಿದ್ದಕ್ಕಾಗಿ 18 ತಿಂಗಳು ಜೈಲುವಾಸವನ್ನು ಸಹ ಕಂಡಿದ್ದರು. 

Share this Story:

Follow Webdunia kannada