Daily Horoscope
✕

ಕಾಡಾನೆ ದಾಳಿಗೆ ಬೆಳೆ ನಾಶ

Webdunia
ಶನಿವಾರ, 26 ನವೆಂಬರ್ 2022 (15:26 IST)
ಕಾಡಾನೆ ದಾಳಿಗೆ ಮಲೆನಾಡಿನ ರೈತರು ರೋಸಿ ಹೋಗಿದ್ದಾರೆ. ಮೈಸೂರು ಭಾಗದಲ್ಲೂ ದಿನಂಪ್ರತಿ ಕಾಡಾನೆಗಳು ಹಿಂಡು ಹಿಂಡಾಗಿ ದಾಳಿ ನಡೆಸಿ, ಬೆಳೆ ನಾಶಗೊಳಿಸ್ತಿವೆ. ಮೈಸೂರಿನ ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಿಂಡು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಒಟ್ಟು 6 ಆನೆಗಳು ಕೃಷಿ ಭೂಮಿಗೆ ಲಗ್ಗೆ ಇಟ್ಟಿದ್ದು, ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬಾಳೆ, ತೆಂಗು, ಕಬ್ಬು ಮತ್ತು ಅಡಿಕೆ ಬೆಳೆಯನ್ನು ನಾಶಗೊಳಿಸಿವೆ. ಪದೇ ಪದೇ ಕಾಡಿನಿಂದ ನಾಡಿಗೆ ಆನೆಗಳು ಬರುತ್ತಿದ್ದು, ಜನ ಕಂಗಾಲಾಗಿದ್ದಾರೆ.  ನಟೇಶ್, ಶಮಿಯುಲ್ಲಾ, ಪ್ರದೀಪ್​​ ಎಂಬುವವರಿಗೆ ಸೇರಿದ್ದ ಜಮೀನಿನಲ್ಲಿ ಆನೆಗಳು ಪುಂಡಾಟ ಮೆರೆದಿವೆ. ಅಪಾರ ಮೌಲ್ಯದ ಬೆಳೆ ನಾಶವಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಆನೆ ದಾಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ಒತ್ತಾಯ ಮಾಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ

ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ: ಬಿ.ವೈ.ವಿಜಯೇಂದ್ರ

ಸಿಇಸಿ ವಿರುದ್ಧ ಪ್ರತಿಭಟನೆಗೆ ಯತ್ನ: ಕಾಕ್ರೋಚ್ ಜನತಾ ಪಾರ್ಟಿಗೆ ಪೊಲೀಸರಿಂದ ಬಿಗ್ ಶಾಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments