Daily Horoscope

ನಿಷ್ಪಕ್ಷಪಾತ ಚುನಾವಣೆಗೆ ಅರೆಮಿಲಿಟರಿ ಪಡೆ ಅಗತ್ಯ: ಕರಂದ್ಲಾಜೆ

Webdunia
ಭಾನುವಾರ, 2 ಏಪ್ರಿಲ್ 2017 (12:30 IST)
ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಉಪಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕಾದಲ್ಲಿ ಅರೆಮಿಲಿಟರಿ ಪಡೆ ಅಗತ್ಯ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದು ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ ನಂತರ ಪೊಲೀಸರು ಕಾಂಗ್ರೆಸ್ ಪರವಾಗಿ ವರ್ತಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ. 
 
ಬೆಂಕಿಮಹಾದೇವ್ ನಿವಾಸದ ಮೇಲೆ ರೈಡ್ ಮಾಡಿದ ಪೊಲೀಸರು ಶೂ ಹಾಕಿಕೊಂಡು ಮನೆಯೊಳಗೆ ಸರ್ಚ್ ಮಾಡಿದ್ದಾರೆ. ರಾತ್ರಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣಕ್ಕೂ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿದರು.
 
ಉಪಚುನಾವಣೆಯಲ್ಲಿ ಪೊಲೀಸರು ರಾಜ್ಯ ಸರಕಾರಕ್ಕೆ ಸಾಥ್ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗುಡುಗಿದರು.
 
ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯನ ಬಂಧನ ಪ್ರಕರಣವನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್‌ನವರು ಬ್ಲಾಕ್ ಆಂಡ್ ವೈಟ್ ಧಂಧೆಯಲ್ಲಿ ತೊಡಗಿದ್ದಾರೆ ಎಂದು ನಾವು ಸದಾ ಹೇಳುತ್ತಿರುವುದಾಗಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಡಿಕೆಶಿ ಭೇಟಿಗೆ ಕೆಲವೇ ಕ್ಷಣಗಳ ಮುನ್ನ ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ಪ್ರತ್ಯಕ್ಷ: ಏನಿದು ಮುಸುಕಿನ ಗುದ್ದಾಟ

ಎಸ್ಐಆರ್ ನಲ್ಲಿ ಹೆಸರು ಡಿಲೀಟ್ ಆಗಿದ್ದಕ್ಕೆ ಸಚಿವರ ಮೇಲೆ ಸಿಟ್ಟಾದ ಕೆಸಿ ವೇಣುಗೋಪಾಲ್ ಹೇಳಿದ್ದೇನು

ಕಳ್ಳತನ ಮಾಡಲು ಬಂದ ಭೂಪ ಗ್ರಿಲ್ ಮಧ್ಯೆ ಸಿಲುಕಿಕೊಂಡ, ನಂತರ ನಡೆದಿದ್ದೇನು ನೋಡಿ video

ಬೀದಿ ನಾಯಿ ಕಾಟ ಸಾಕಾಗಿ ಹೋಯ್ತು: ರೊಚ್ಚಿಗೆದ್ದ ಜನ ಅಧಿಕಾರಿ ಟೇಬಲ್ ಮೇಲೆ ಗೋಣಿ ಚೀಲದಲ್ಲಿ ನಾಯಿ ತಂದು ಸುರಿದ್ರು Video

ಪ್ರೀತಿಸಿ ಮದುವೆಯಾಗಿ ಬಂದಿದ್ದ ಯುವತಿಯನ್ನು ದಾಸರಹಳ್ಳಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಕಿಡ್ನ್ಯಾಪ್ Video

ಮುಂದಿನ ಸುದ್ದಿ
Show comments