Select Your Language

Notifications

webdunia
webdunia
webdunia
webdunia

ಘೋರ ದುರಂತ : ರೈಲಿಗೆ ಸಿಲುಕಿ 5 ಬಲಿ

ಘೋರ ದುರಂತ : ರೈಲಿಗೆ ಸಿಲುಕಿ 5 ಬಲಿ
ಪಾಟ್ನಾ , ಗುರುವಾರ, 27 ಆಗಸ್ಟ್ 2015 (08:30 IST)
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರೈಲ್ವೆ ಹಳಿ ದಾಟುತ್ತಿದ್ದ ಐವರ ಮೇಲೆ ರೈಲು ಹರಿದು ಐವರು ಮೃತಪಟ್ಟ ದಾರುಣ ಘಟನೆ ಬುಧವಾರ ರಾತ್ರಿ 9 ಗಂಟೆಗೆ ನಡೆದಿದೆ.

ರಾಜೇಂದ್ರ ನಗರದ ಟರ್ಮಿನಲ್ ಸ್ಟೇಷನ್‌ ಬಳಿ ಚಲಿಸುತ್ತಿದ್ದ ಪಾಟ್ನಾ-ಇಸ್ಲಾಮ್‌ಪುರ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಐದು 
ಜನ ದುರ್ಮರಣವನ್ನಪ್ಪಿದ್ದಾರೆ.
 
ರೈಲು ಬರುತ್ತಿರುವುದನ್ನು ಗಮನಿಸದೇ ಹಳಿಯನ್ನು ದಾಟುವ ವೇಳೆ ದುರಂತ ಸಂಭವಿಸಿದೆ ಎಂದು ಪೂರ್ವ ರೈಲ್ವೆ ಅಧಿಕಾರಿ ಎ.ಕೆ ರಜಾಕ್ ತಿಳಿಸಿದ್ದಾರೆ. 
 
ಮೃತರ ಗುರುತು ಪತ್ತೆ ಕಾರ್ಯ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 

Share this Story:

Follow Webdunia kannada