Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ನಡೆದ ಟೆಕ್ನೋವಶನ್ ಚಾಲೆಂಜ್ ಗೆದ್ದ ಬೆಂಗಳೂರು ವಿದ್ಯಾರ್ಥಿನಿಯರು

ಅಮೆರಿಕದಲ್ಲಿ ನಡೆದ ಟೆಕ್ನೋವಶನ್ ಚಾಲೆಂಜ್ ಗೆದ್ದ ಬೆಂಗಳೂರು ವಿದ್ಯಾರ್ಥಿನಿಯರು
ಬೆಂಗಳೂರು , ಸೋಮವಾರ, 29 ಜೂನ್ 2015 (20:16 IST)
ಅಮೆರಿಕದ ಸಾನ್‌ಫ್ರಾನ್ಸಿಸ್ಕೊ ನಗರದಲ್ಲಿ ನಡೆದ ಜಾಗತಿಕ ಮಟ್ಟದ ಟೆಕ್ನೋವಶನ್ ಚಾಲೆಂಜ್ ಸ್ಪ್ರಧೆಯಲ್ಲಿ ಬೆಂಗಳೂರಿನ ಐವರು ಹದಿಹರೆಯದ ವಿದ್ಯಾರ್ಥಿನಿಯರು ಜಯಗಳಿಸಿದ್ದಾರೆ. 
14 ವರ್ಷ ವಯಸ್ಸಿನ ಸಂಜನಾ ವಸಂತ್, ಎನ್.ಅನುಪಮಾ, ಮಹಿಮಾ ಮೆಹೆನ್‌ದಾಳೆ, ಸ್ವಸ್ತಿ ಪಿ.ರಾವ್ ಮತ್ತು ಬಿ.ನವ್ಯಶ್ರೀ  ಪ್ರಶಸ್ತಿ ಗಳಿಸಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಮಿಷನ್, ಡಿಜಿಟಲ್ ಇಂಡಿಯಾ ಮತ್ತು ಹೆಣ್ಣುಮಗುವನ್ನು ಉಳಿಸಿ ಘೋಷಣೆಗಳಿಂದಾಗಿ ಪ್ರಭಾವಿತರಾಗಿದ್ದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.   
 
ಕರ್ನಾಟಕದ ಹೆಮ್ಮೆಯ ಪುತ್ರಿಯರಾದ ವಿದ್ಯಾರ್ಥಿನಿಯರು 64 ರಾಷ್ಟ್ರಗಳಿಂದ ಬಂದ 400 ಸ್ಪರ್ಧಾಳುಗಳನ್ನು ಸೋಲಿಸಿ 10 ಸಾವಿರ ಡಾಲರ್ ನಗದು ಬಹುಮಾನದೊಂದಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.   
 
ಜಾಗತಿಕ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರು ಜಯಗಳಿಸಿದ್ದಕ್ಕಾಗಿ ಅನೇಕ ಸಂಘ ಸಂಸ್ಥೆಗಳು ಅಭಿನಂದಿಸಿದ್ದು, ಭಾರತಕ್ಕೆ ವಾಪಸಾದ ಕೂಡಲೇ ಸನ್ಮಾನಿಸಲು ನಿರ್ಧರಿಸಿವೆ ಎಂದು ವಿದ್ಯಾರ್ಥಿನಿಯರ ಪೋಷಕರು ತಿಳಿಸಿದ್ದಾರೆ. 
 

Share this Story:

Follow Webdunia kannada