Webdunia - Bharat's app for daily news and videos

Install App

ವಾಹನ ಸವಾರರಿಗೆ ಶಾಕ್:‌ ನಂಬರ್‌ ಪ್ಲೇಟ್‌ ದೋಷ ಸರಿಪಡಿಸಲು 7 ದಿನ ಗಡುವು!

Webdunia
ಶುಕ್ರವಾರ, 3 ಜೂನ್ 2022 (15:03 IST)
ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಜೂನ್ 10 ರೊಳಗೆ ಸರಿಪಡಿಸಿಕೊಳ್ಳದಿದ್ದರೆ ದಂಡ ವಿಧಿಸಲಾಗುವುದು ಎಂದು ವಾಹನ ಸವಾರರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
7 ದಿನದೊಳಗಾಗಿ ನಂಬರ್‌ ಪ್ಲೇಟ್‌ ದೋಷ ಸರಿಪಡಿಸಿಕೊಳ್ಳದಿದ್ದರೆ ಎರಡು ಬಾರಿ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುವುದು. ಮೂರನೇ ಬಾರಿಯೂ ತಪ್ಪು ತಿದ್ದಿಕೊಳ್ಳದೇ ಇದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಸಾರಿಗೆ ಇಲಾಖೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಟಿಎಚ್‌ಎಂ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರಿಗೆ ದೋಷಯುಕ್ತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಚಿತ್ರಗಳನ್ನು ಕಳುಹಿಸಲು ಇಲಾಖೆಯು ಹೊಸ ವಾಟ್ಸಾಪ್ ಸಂಖ್ಯೆ (9449863459) ಅನ್ನು ಪ್ರಾರಂಭಿಸಿದೆ, ಅದನ್ನು ಅಪ್‌ಲೋಡ್ ಮಾಡಿ ನಾವು ನೀಡಿರುವ ಸಂಖ್ಯೆಗೆ ಕಳುಹಿಸಬಹುದು. ಇದರಿಂದ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಕಳುಹಿಸುವವರ ಗುರುತನ್ನು ಗೌಪ್ಯವಾಗಿಡಲಾಗುವುದು. ತಪ್ಪಾದ ಫಾಂಟ್‌ಗಳು, ಫ್ಯಾನ್ಸಿ ಡಿಸೈನ್ ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಏಜೆನ್ಸಿಗಳ ಹೆಸರನ್ನು ಸರ್ಕಾರಿ ವಾಹನಗಳಿಗೆ ಬಳಸಲಾಗುತ್ತಿದೆ ಎಂದು ಕುಮಾರ್ ಹೇಳಿದರು. ಹೈಕೋರ್ಟ್ ಆದೇಶದ ನಂತರ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ, ಜನರಿಗೆ ಈಗಾಗಲೇ ಅದರ ಬಗ್ಗೆ ತಿಳಿದಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ಆದೇಶದ ಹೊರತಾಗಿಯೂ, ಜನರು ತಮ್ಮ ವಾಹನಗಳಿಗೆ ಸರಿಯಾದ ನಂಬರ್ ಪ್ಲೇಟ್‌ಗಳನ್ನು ಸರಿಪಡಿಸಲು ವಿಫಲರಾಗಿದ್ದಾರೆ. ಹೀಗಾಗಿ ಈ ವಾಹನಗಳ ಮೇಲೆ ನಿಗಾ ಇಡಲು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದರು. ಮಾಲೀಕರು ಅಥವಾ ಸಂಸ್ಥೆಗಳು ನಂಬರ್ ಪ್ಲೇಟ್‌ಗಳಲ್ಲಿ ಹೆಸರುಗಳು ಅಥವಾ ವಿನ್ಯಾಸಗಳನ್ನು ಸ್ಥಾಪಿಸಲು ಬಯಸಿದರೆ, ಅವರು ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಮೊದಲ ಬಾರಿ ಅಪರಾಧ ಎಸಗಿದವರಿಗೆ 500 ರೂ., ಎರಡನೇ ಬಾರಿಗೆ 1,000 ರೂ. ದಂಡ ವಿಧಿಸಲಾಗುವುದು ಮತ್ತು ಮೂರನೇ ಬಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಕುಮಾರ್ ವಿವರಿಸಿದರು.  ಏತನ್ಮಧ್ಯೆ, ವಾಹನ ನೋಂದಣಿ ಫಲಕದಲ್ಲಿ ನಿಗದಿತ ಫಾಂಟ್ ಗಾತ್ರವನ್ನು ಅನುಸರಿಸದ ವಾಹನ ಮಾಲೀಕರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments