Webdunia - Bharat's app for daily news and videos

Install App

ರಕ್ಷಕನೇ ರಕ್ಕಸನಾದ: ಅಪ್ರಾಪ್ತ ಮಗಳನ್ನು ಹಾಸಿಗೆಗೆಳೆದ ಹಡೆದಪ್ಪ

Webdunia
ಮಂಗಳವಾರ, 26 ಆಗಸ್ಟ್ 2014 (11:15 IST)
ತಾವು ಹಡೆದ ಮಗಳ ಮೇಲೆಯೇ ತನ್ನ ಗಂಡ ಕಾಮುಕ ಕಣ್ಣನ್ನು ಬೀರುತ್ತಿದ್ದಾನೆ ಎಂದು ತಿಳಿದ ತಾಯಿ ಮಗಳನ್ನು ಆತನಿಂದ ದೂರವಿಟ್ಟು ರಕ್ಷಿಸಲು  ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಗಂಡನ ವಿರುದ್ಧವೇ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನ ಪುಟ್ಟ ಮಗಳ ಮೇಲಾದ ಪೈಶಾಚಿಕ ಕೃತ್ಯಕ್ಕೆ ನ್ಯಾಯ ಕೇಳುತ್ತಿದ್ದಾಳೆ. 

ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲಿ ಎಂಬ  ಗ್ರಾಮದಲ್ಲಿ ನಡೆದ ಘಟನೆಯಲ್ಲಿ  ಲೋಕೇಶ್ ಎಂಬಾತ ಆಗಸ್ಟ್ 24 ರಂದು ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆತನ ಹೆಂಡತಿ ಮಲ್ಲಂದೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಕಳೆದ 6 ತಿಂಗಳುಗಳ ಹಿಂದೆ ನನ್ನ ಗಂಡ ನನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ.ನನ್ನ ಗಂಡನ ಕುದೃಷ್ಟಿಯಿಂದ ಮಗಳನ್ನು ಕಾಪಾಡುವ ಉದ್ದೇಶದಿಂದ, ಆಕೆಯನ್ನು ವಸತಿ ನಿಲಯದಲ್ಲಿಟ್ಟು ಓದಿಸತೊಡಗಿದೆ. ಕಳೆದ ವಾರ ಶಾಲೆಗೆ ರಜೆ ಇದ್ದುದರಿಂದ ಮನೆಗೆ ಬಂದಿದ್ದ ಮಗಳ ಮೇಲೆ ಸಮಯ ಸಾಧಿಸಿ ಗಂಡ ಲೋಕೋಶ್ ಅತ್ಯಾಚಾರ ನಡೆಸಿದ್ದಾನೆ ಎಂದು  ಬಲಿಪಶುವಿನ ನೊಂದ ತಾಯಿ ದೂರು ನೀಡಿದ್ದಾಳೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments