Daily Horoscope
✕

ಸಿಮ್ ಬೇಕು ಎಂದಿದ್ದಕ್ಕೆ ಮಗಳನ್ನೇ ಕೊಂದ ತಂದೆ

Webdunia
ಶುಕ್ರವಾರ, 1 ಫೆಬ್ರವರಿ 2019 (06:05 IST)
ದಾವಣಗೆರೆ : ಸಿಮ್ ಬೇಕು ಎಂದು ಕೇಳಿದ್ದಕ್ಕೆ ಅನುಮಾನಗೊಂಡ ತಂದೆ ಮಗಳನ್ನೇ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.


ಅನಿತಾ ಕೊಲೆಯಾದ ಯುವತಿ, ಕಲ್ಲೇಶಪ್ಪ ಮಗಳನ್ನೇ ಕೊಂದ ತಂದೆ. ಅನಿತಾ ಫೋನಿನಲ್ಲಿ ಮಾತನಾಡಲು ಸಿಮ್ ಬೇಕು ಎಂದು ತನ್ನ ತಂದೆಯ ಬಳಿ ಕೇಳಿದ್ದಾಳೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ತಂದೆ ಸಿಮ್ ಕೊಡಿಸುವುದಾಗಿ ಹೇಳಿ ಮಗಳನ್ನು ಕರೆದುಕೊಂಡು ಹೋಗಿ ಅಡಕೆ ಹೊಲದಲ್ಲಿ ವೇಲ್ ​ನಿಂದ‌ ಅನಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.


ಆದರೆ ಅನಿತಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಕೆಯ ತಂದೆಯ ವಿರೋಧವಿತ್ತು ಎನ್ನಲಾಗಿದೆ. ಆದರೆ ಇದೀಗ ಮಗಳು ತನ್ನ ಪ್ರಿಯಕರನ ಜೊತೆ ಮಾತನಾಡುವುದಕ್ಕೆ ಸಿಮ್ ಕೇಳಿದ್ದಾಳೆ ಎಂದು ಭಾವಿಸಿ ಆತ ಮಗಳನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.


ಇನ್ನೂ ಕೊಲೆಯಾದ ಅನಿತಾಳ ಚಿಕ್ಕಪ್ಪನೇ ಜಗಳೂರು ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಇಂದು ಸಿಜೆಪಿ ತಿರಂಗಾ ಮಾರ್ಚ್: ಕಾನಾಟ್ ಪ್ಲೇಸ್ ಸೆಂಟ್ರಲ್ ಪಾರ್ಕ್ ಬಂದ್, ಬಿಗಿ ಪೊಲೀಸ್ ಭದ್ರತೆ

ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಇಂದು ಡಾ. ಸುಧಾ ಯಾದವ್ ಅಧಿಕೃತ ಪ್ರಮಾಣವಚನ ಸ್ವೀಕಾರ

Karnataka Weather: ಬೆಂಗಳೂರು ಸೇರಿ ನಿಮ್ಮ ಜಿಲ್ಲೆಯಲ್ಲಿ ವಾತಾವರಣ ಹೇಗಿರಲಿದೆ, ಇಲ್ಲಿದೆ ವಿವರ

ಪ್ರಧಾನಿ ಕುರ್ಚಿ ಬೇಕೆಂದರೆ ಹೋರಾಡಿ, ಅದು ಬಿಟ್ಟು ಅರಾಜಕತೆ ಸೃಷ್ಟಿಸಬೇಡಿ… ಪ್ರಧಾನಿ ಮೋದಿ ಉಗ್ರಾವತಾರ Video

ನ್ಯಾಯಾಂಗವನ್ನು ಬೆದರಿಸಲು ಯಾರಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ

ಮುಂದಿನ ಸುದ್ದಿ
Show comments