ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ರೈತ ಸಂಪರ್ಕ ಕಚೇರಿಯಲ್ಲಿ ರೈತರು ಬಿತ್ತನೆ ಬೀಜ ಪಡೆಯಲು ರೈತರು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನ ನೀಡಬೇಕೆಂಬ ಸೂಚನೆ ಇದ್ರೂ, ಎರಡು ದಿನ ಮಾತ್ರ ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ನೀಡಿ ಬಳಿಕ ಭಿತ್ತನೆ ಬೀಜಗಳನ್ನು ತಾಲೂಕು ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡ್ತಾ ಇದ್ದಾರೆ.. ಹೋಬಳಿಗಳಲ್ಲಿ ವಿತರಿಸದೇ ತಾಲೂಕು ಕೇಂದ್ರದಲ್ಲಿ ಬೀಜ ವಿತರಿಸುತ್ತಿದ್ದಾರೆ ಅಂತಾ ಅಧಿಕಾರಿಗಳ ವಿರುದ್ದ ರೈತರು ಕಿಡಿಕಾರಿದ್ದಾರೆ.. ಅಷ್ಟೇ ಅಲ್ಲದೇ ಅನವಶ್ಯಕವಾಗಿ ಗೂಡ್ಸ್ ವಾಹನಗಳಿಗೆ ಬಾಡಿಗೆ ನೀಡಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದರು.