Webdunia - Bharat's app for daily news and videos

Install App

ವಿಷ್ಣುವರ್ಧನ್ ಸ್ಮಾರಕಕ್ಕೆ ಪೂಜೆ ಮಾಡಲು ಬಂದ ಅಭಿಮಾನಿಗಳಿಗೆ ರೈತ ಮಹಿಳೆ ಮಾಡಿದ್ದೇನು ಗೊತ್ತಾ?

Webdunia
ಮಂಗಳವಾರ, 4 ಡಿಸೆಂಬರ್ 2018 (09:42 IST)
ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕೆಂಬ ವಿಚಾರದಲ್ಲಿ ಗೊಂದಲಗಳು ಮುಂದುವರಿದ ಬೆನ್ನಲ್ಲೇ ಮೈಸೂರಿನಲ್ಲಿ ಈ ಹಿಂದೆ ಸರ್ಕಾರ ನೀಡಿದ್ದ ಜಮೀನಿನಲ್ಲಿ ಪೂಜೆ ಮಾಡಲು ಬಂದ ಅಭಿಮಾನಿಗಳಿಗೆ ರೈತ ಮಹಿಳೆಯೊಬ್ಬಳು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.


ವಿಷ್ಣು ಅಭಿಮಾನಿಗಳ ಸಂಘ ವಿಷ್ಣು ಸೇನಾ ಸಮಿತಿ ಎಚ್ ಡಿ ಕೋಟೆ ರಸ್ತೆಯಲ್ಲಿ ಈ ಹಿಂದೆ ಸರ್ಕಾರ ನೀಡಿದ್ದ ಜಮೀನಿನಲ್ಲಿ ವಿಷ್ಣು ಬ್ಯಾನರ್ ಕಟ್ಟಿ ಪೂಜೆ ಮಾಡಿ ಸರ್ಕಾರದ ವಿಳಂಬ ನೀತಿ ವಿರುದ್ಧ ಪ್ರತಿಭಟನೆಗೆ ಮುಂದಾಯಿತು. ಈ ಜಮೀನು ಈಗ ರೈತರ ಸಾಗುವಳಿ ಭೂಮಿ ಎಂಬ ಕಾರಣಕ್ಕೆ ವಿವಾದದಲ್ಲಿದೆ.

ವಿಷ್ಣು ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಅಲ್ಲಿಗೆ ಬಂದ ರೈತ ಮಹಿಳೆ ಪ್ರತಿಭಟನಾಕಾರರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ನಮ್ಮ ಜೀವನಕ್ಕೆ ಈ ಜಮೀನೇ ಆಧಾರ. ಮೊದಲು ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಕೊಡಿ. ನಂತರ ಸ್ಮಾರಕ ನಿರ್ಮಾಣವಾಗಲಿ. ಸ್ಮಾರಕ ನಿರ್ಮಾಣಕ್ಕೆ ನಮ್ಮದೇನೂ ತಕಾರಾರಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳು ತಮಗೆ ಬೇಕಾದ ಜಾಗವನ್ನು ಸರ್ಕಾರ ಕೊಡಲಿದೆ. ನಿಮಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಒಂದು ವೇಳೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ನಾವೇ ದೇಣಿಗೆ ಸಂಗ್ರಹಿಸಿ ಬೇರೆ ಜಮೀನು ಖರೀದಿಸಿ ಆ ಜಾಗಲ್ಲಿ ಸ್ಮಾರಕ ನಿರ್ಮಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments