Select Your Language

Notifications

webdunia
webdunia
webdunia
webdunia

ರೈತರ ಆತ್ಮಹತ್ಯೆ: ಅರಿವು ಮೂಡಿಸಲು ಫಿಲ್ಮ್ ಛೇಂಬರ್‌ನಿಂದ ಸಾಕ್ಷ್ಯಚಿತ್ರ

ರೈತರ ಆತ್ಮಹತ್ಯೆ: ಅರಿವು ಮೂಡಿಸಲು ಫಿಲ್ಮ್ ಛೇಂಬರ್‌ನಿಂದ ಸಾಕ್ಷ್ಯಚಿತ್ರ
ಬೆಂಗಳೂರು , ಮಂಗಳವಾರ, 7 ಜುಲೈ 2015 (16:50 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಚಲನಚಿತ್ರ ವಾಣಿಜ್ಯ ಮಂಡಳಿಯು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. 
 
ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಥಾಮಸ್ ಡಿಸೋಜಾ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಿವು ಮೂಡಿಸುವುದು ಅನಿವಾರ್ಯ. ಅನ್ನದಾತನಿಗೆ ನೋವಿರುವುದು ಸತ್ಯ. ಆದರೆ ಆತ್ಮಹತ್ಯೆಯೇ ಪರಿಹಾರವೇ ಎಂಬ ಅಂಶಗಳನ್ನಿಟ್ಟುಕೊಂಡು ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಮಯ್ಯ ಅವರ ಸಲಹೆಯನ್ನು ಪಡೆಯಲಿದ್ದೇವೆ ಎಂದಿದ್ದಾರೆ. 
 
ಇನ್ನು ಈ ಸಾಕ್ಷ್ಯಚಿತ್ರವು ಚೇಂಬರ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಭಾಮಾ ಹರೀಶ್ ಅವರ ಸಹಕಾರದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಚಿತ್ರವನ್ನು ಇಬ್ಬರು ಯುವ ನಿರ್ದೇಶಕರು ನಿರ್ದೇಶಿಸಿದ್ದಾರೆ.  ತಾರಾಗಣದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರೇ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ. 

Share this Story:

Follow Webdunia kannada