ಸರ್ಕಾರದ ವಿರುದ್ಧ ರೈತ ಮುಖಂಡ ಕುರುಬುರು ಶಾಂತಕುಮಾರ್ ಆಕ್ರೋಶ

Webdunia
ಶುಕ್ರವಾರ, 18 ಆಗಸ್ಟ್ 2023 (14:02 IST)
ತಮಿಳುನಾಡಿಗೆ ನೀರು ಬಿಡುವ ಮುಖಾಂತರ ನಾಡಿನ ಅನ್ನದಾತರಿಗೆ ಸರ್ಕಾರ ದ್ರೋಹ ಬಗೆದಿದೆ ಎಂದು 
ಸರ್ಕಾರದ ವಿರುದ್ಧ ಕುರುಬರು ಶಾಂತಕುಮಾರ್  ಆಕ್ರೋಶ ಹೊರಹಾಕಿದ್ದಾರೆ.ರೈತರ ಹಿತಾಸಕ್ತಿ ಕಾಪಾಡೊಗಾಗಿ ಹೇಳಿ ಅಧಿಕಾರಕ್ಕೆ ಬಂದು ಇದೀಗ ರೈತರಿಗೆ ಸರ್ಕಾರ ಮೋಸ ಮಾಡುತ್ತಿದೆ.ರಾಜ್ಯದಲ್ಲಿ ಮಳೆ ಪ್ರಮಾಣ ಕಮ್ಮಿ ಇದ್ದರು ತಮಿಳುನಾಡಿಗೆ ನೀರು ಬಿಡುವುದು ಎಷ್ಟು ಸರಿ.ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ ಈಗಾಗಲೇ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಡಿಸಿಎಂ ಡಿಕೆ ಶಿವಕುಮಾರ್ ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸ್ತೀವಿ ಅನ್ನೋದು ಎಷ್ಟರ ಮಟ್ಟಿಗೆ ಸರಿ.ನಿಮ್ಮ ನಾಡಿನ ಜನತೆಯ ಹಿತಾಸಕ್ತಿ ಕಾಪಾಡಲು ಅಧಿಕಾರ ಕೊಟ್ಟಿದ್ದು ನಿಮಗೆ ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಅಲ್ಲ.ಯಾರನ್ನ ಮೆಚ್ಚಿಸುವ ಸಲುವಾಗಿ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ ಡಿಕೆ ಶಿವಕುಮಾರ್ ಇದೆಲ್ಲ ನಿಲ್ಲಿಸಬೇಕು.ತಮಿಳುನಾಡಿಗೆ ಬಿಡ್ತಾ ಇರುವ ನೀರನ್ನು ತಕ್ಷಣವೇ ನಿಲ್ಲಿಸಿ ನಮ್ಮ ನಾಡಿನ ರೈತರಿಗೆ ನೀರು ಕೊಡಿ.ನಿಮ್ಮ ಬಿಟ್ಟಿ ಸಲಹೆಗಳು ನಮಗೆ ಅವಶ್ಯಕತೆ ಇಲ್ಲ .ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ . ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಸರಕಾರಕ್ಕೆ  ರೈತ ಸಂಘಟನೆ ಹೋರಾಟಗಾರ ಕುರುಬರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸರಕಾರದಿಂದ ಒಳಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶ: ಗೋವಿಂದ ಕಾರಜೋಳ

ರಾಜಕೀಯದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲು ಸಜ್ಜಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್

ಮಾನವಿಯತೆಯೇ ಇಲ್ಲ, ಬೈಕ್ ಸವಾರನಿಗೆ ಕಾರಿನಿಂದ ಢಿಕ್ಕಿ ಹೊಡೆದು ಕೊಂದ ದಂಪತಿ: ವಿಡಿಯೋ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

ಮುಂದಿನ ಸುದ್ದಿ
Show comments