ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಆದರೆ ವಿಕೇಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಜನರು ರಸ್ತೆಗಿಳಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಕರ್ಫ್ಯೂ ಬೆನ್ನಲ್ಲೇ ಬೆಂಗಳೂರಿನ (Bengaluru) ಬಹುತೇಕ ಕಡೆ ಅನಾವಶ್ಯಕವಾಗಿ ರಸ್ತೆಗಿಳಿಯುವವರನ್ನು ಪೋಲಿಸರು ವಿಚಾರಿಸುತ್ತಿದ್ದಾರೆ. ಹೀಗೆ ವಿಚಾರಣೆ ವೇಳೆ ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ರಸ್ತೆಗಿಳಿದಿದ್ದ ಯುವಕನೊಬ್ಬನ ಬೈಕನ್ನು ಪೋಲಿಸರು ಸೀಝ್ ಮಾಡಿದ್ದಾರೆ.
ಸ್ಯಾಟಲೈಟ್ ಬಸ್ ಸ್ಟಾಪ್ (Satellite Bus Station) ಚೆಕ್ ಪೋಸ್ಟ್‌ನಲ್ಲಿ ಝೋಮ್ಯಾಟೋ ಬ್ಯಾಗ್ ಜತೆಗೆ ಬೈಕ್ ಮೇಲೆ ಬಂದಿದ್ದ ಯುವಕನನ್ನು ಪೋಲಿಸರು ತಡೆದು ವಿಚಾರಿಸಿದ್ದಾರೆ. "ಎಲ್ಲಿಗಪ್ಪಾ ಹೋಗ್ತಾ ಇದೀಯಾ" ಎಂದು ಪೋಲಿಸರು ಯುವಕನಿಗೆ ಕೇಳಿದ್ದಾರೆ. ಈ ವೇಳೆ ಯುವಕ "ಸರ್ ಝೋಮ್ಯಾಟೋ ಬುಕಿಂಗ್ ಇದೆ ಸರ್ ಊಟ ತೆಗೆದುಕೊಂಡು ಹೋಗ್ತಾ ಇದೀನಿ" ಎಂದು ಉತ್ತರಿಸಿದ್ದಾನೆ. ಆದರೆ ಬ್ಯಾಗ್‌ನಲ್ಲಿರುವ ಆಹಾರ ಪೊಟ್ಟಣ ತೋರಿಸು ಎಂದಾಗ ಝೋಮ್ಯಾಟೋ ಬಾಯ್ ಅಸಲಿ ಮುಖ ಅನಾವರಣಗೊಂಡಿದೆ.