Select Your Language

Notifications

webdunia
webdunia
webdunia
webdunia

ಭ್ರಷ್ಟರಿಂದ ಸರಕಾರ ಅಸ್ಥಿರಗೊಳಿಸಲು ಯತ್ನ: ಮಹಾದೇವ ಪ್ರಸಾದ್

ಭ್ರಷ್ಟರಿಂದ ಸರಕಾರ ಅಸ್ಥಿರಗೊಳಿಸಲು ಯತ್ನ: ಮಹಾದೇವ ಪ್ರಸಾದ್
ಬೆಂಗಳೂರು , ಮಂಗಳವಾರ, 27 ಜನವರಿ 2015 (16:58 IST)
ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದವರನ್ನು ಭೇಟಿ ಮಾಡಿದ ಲೋಖೋಪಯೋಗಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಭ್ರಷ್ಟರು ಶ್ರಮಿಸುತ್ತಿದ್ದು, ಇದನ್ನು ತಡೆಯಲು ಶೋಷಿತ ವರ್ಗಗಳು ಸರ್ಕಾರದ ಪರ ನಿಲ್ಲಬೇಕಿದೆ ಎಂದಿದ್ದಾರೆ. 
 
ಸರ್ಕಾರ ಪರಿಶಿಷ್ಟ ಪಂಗಡ ಸಮುದಾಯದ ಅಭ್ಯರ್ಥಿಗಳಿಗೆ ಪ್ರಸ್ತುತ ಶೇ.3ರಷ್ಟು ಮೀಸಲಾತಿ ಮಾತ್ರ ಕಲ್ಪಿಸಿದ್ದು, ಇದನ್ನು 7.5ಕ್ಕೆ ಏರಿಸಬೇಕೆಂದು ಒತ್ತಾಯಿಸಿ ರಾಷ್ಟ್ರ ವಾಲ್ಮೀಕಿ ಮಹಾಸಭಾವು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇಲ್ಲಿಗೆ ತೆರಳಿದ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. 
 
ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಭ್ರಷ್ಟರು ಹುನ್ನಾರ ನಡೆಸುತ್ತಿದ್ದು, ಅನೇಕ ರೀತಿಯ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶೋಷಿತ ವರ್ಗದವರೂ ಕೂಡ ಸರ್ಕಾರದ ಜೊತೆ ಸೇರಿಕೊಳ್ಳಬೇಕು. ಅಲ್ಲದೆ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಸಾಥ್ ನೀಡಬೇಕಿದೆ ಎಂದರು. 

Share this Story:

Follow Webdunia kannada