Webdunia - Bharat's app for daily news and videos

Install App

ರಾಮದಾಸ್‌ ಪ್ರೇಮಪುರಾಣದ ಪ್ರೇಮಕುಮಾರಿ ಈಗ ಸ್ಯಾಂಡಲ್‌ವುಡ್ ನಟಿ

Webdunia
ಶುಕ್ರವಾರ, 17 ಅಕ್ಟೋಬರ್ 2014 (14:14 IST)
ಮಾಜಿ ಸಚಿವ ಎಸ್‌.ಎ. ರಾಮದಾಸ್‌ 'ಪ್ರೇಮಪುರಾಣ'ದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಪ್ರೇಮಕುಮಾರಿ ಈಗ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. 'ಲವ್‌ ಆನ್‌ ಎನ್‌ಎಚ್‌ 4' ಎಂಬ ಚಿತ್ರದಲ್ಲೊಂದು ಪಾತ್ರ ಮಾಡುತ್ತಿದ್ದಾರೆ. ಗುರುವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರೇಮಕುಮಾರಿ ಭಾಗಿಯಾಗಿದ್ದಾರೆ. ಚಿತ್ರವನ್ನು ಮೈಸೂರಿನ ಶ್ರೀನಾಥ್‌ ನಿರ್ದೇಶಿಸುತ್ತಿದ್ದಾರೆ. 
 
ನೀಳ ಕೇಶ ಹೊಂದಿದ್ದ ಪ್ರೇಮಕುಮಾರಿ ಈಗ ಬಾಬ್‌ಕಟ್‌ನಲ್ಲಿ ಮಿಂಚುತ್ತಿದ್ದು, ಇಲ್ಲಿ ತಮ್ಮ ಜೀವನಕ್ಕೆ ಹತ್ತಿರವಾದ ಪಾತ್ರವನ್ನೇ ಮಾಡುತ್ತಿದ್ದಾರಂತೆ. ಈ ಪಾತ್ರಕ್ಕೆ ಅವರೇ ಹೊಂದಿಕೆಯಾಗುತ್ತಾರೆಂಬ ಕಾರಣಕ್ಕೆ ನಿರ್ದೇಶಕರು ಅವರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದು, ಪ್ರೇಮಕುಮಾರಿಯಾಗಿಯೇ ಕಾಣಿಸಿಕೊಂಡಿದ್ದಾರೆ.
 
ಈ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಾಥ್‌, 'ಚಿತ್ರದಲ್ಲೊಂದು ಪಾತ್ರವಿತ್ತು, ಅದನ್ನು ಪ್ರೇಮಕುಮಾರಿ ಮಾಡಿದ್ದಾರೆ. ಇಲ್ಲಿ ಅವರು ಪ್ರೇಮಕುಮಾರಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ' ಎಂದು ಹೇಳುತ್ತಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಈ ಚಿತ್ರದಲ್ಲಿ 'ಬಿಗ್‌ ಬಾಸ್‌' ಅಕುಲ್‌ ಬಾಲಾಜಿ, ತಿಲಕ್‌ ನಾಯಕರಾಗಿ ನಟಿಸುತ್ತಿದ್ದಾರೆ. ವಿವಾದಿತ ನಟಿ ನಯನಾ ಕೃಷ್ಣ ಇಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments