Select Your Language

Notifications

webdunia
webdunia
webdunia
webdunia

ಕಲಾಂ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ ಎಸ್ಎಂಕೆ

ಕಲಾಂ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ ಎಸ್ಎಂಕೆ
ಬೆಂಗಳೂರು , ಮಂಗಳವಾರ, 28 ಜುಲೈ 2015 (12:03 IST)
ಪಾಠ ಮಾಡುತ್ತಲೇ ಕೊನೆಯುಸಿರೆಳೆದಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಸುನೀಗಿರುವ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರತಿಕ್ರಿಯಿಸಿದ್ದು, ಕಲಾಂ ಅವರ ಆಕಸ್ಮಿಕ ನಿಧನ ದೇಶದಲ್ಲಿ ಸಂಚಲನ ಉಂಟು ಮಾಡಿದ್ದು, ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಆಕಸ್ಮಿಕ ನಿಧನ ಆಘಾತ ತಂದಿದ್ದು, ದೇಶದ ಜನರಿಗೆ ಶಾಕ್ ನೀಡಿದೆ. ಅವರು ರಾಷ್ಟ್ರದ ಜನಪ್ರಿಯ ರಾಷ್ಟ್ರಪತಿಗಳಲ್ಲಿ ಮುಂಚೂಣಿಯಲ್ಲಿದ್ದವರು. ಯುವ ಪೀಳಿಗೆ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದ ಅವರು, ಸದಾ ಲವಲವಿಕೆಯಿಂದ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದವರು ಎಂದು ಅವರ ಸಾಧನೆಯನ್ನು ಸ್ಮರಿಸಿಕೊಂಡರು. 
 
ತಮ್ಮದೇ ಆದ ವಿಭಿನ್ನ, ಅಪರಿಮಿತ ಜ್ಞಾನದಿಂದ 21ನೇ ಶತಮಾನದಲ್ಲಿ ದೇಶವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋದವರು. ತಮ್ಮ ಭಾಷಣಗಳ ಮೂಲಕವೇ ವಿಚಾರ ಪ್ರಚೋದನೆ ಮಾಡುವ ಮನೋವೃತ್ತಿ ಹೊಂದಿದ್ದ ಅವರ ನಿಧನದಿಂದ ಅನಾಥ ಪ್ರಜ್ಞೆಯಂತೆ ಕಾಡುತ್ತಿದೆ. ಅವರ ಆದರ್ಶ ಹಾಗೂ ನಡವಳಿಕೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ನಾನು ಮಹಾರಾಷ್ಟ್ರದ ಗವರ್ನರ್ ಆಗಿದ್ದಾಗ ಕಲಾಂ ಹಾಗೂ ನನ್ನ ಒಡನಾಟ ಬಲಗೊಂಡಿತು. ತಮ್ಮನ್ನು ಭೇಟಿಯಾಗಲು ಆಗಾಗ ಮುಂಬೈಗೆ ಬರುತ್ತಿದ್ದರು. ಅಲ್ಲದೆ ಸರಳ ಸಜ್ಜನಿಕೆಗೆ ಹೆಸರುವಾಸಿಯಾದ ವ್ಯಕ್ತಿ ಎಂದರೆ ಅದು ಕಲಾಂ ಮಾತ್ರ ಎಂದು ಸ್ಮರಿಸಿಕೊಂಡು ಸಂತಾಪ ವ್ಯಕ್ತಪಡಿಸಿದರು.

Share this Story:

Follow Webdunia kannada