Select Your Language

Notifications

webdunia
webdunia
webdunia
webdunia

145 ವಸತಿ ಶಾಲೆಗಳ ಸ್ಥಾಪನೆ: ಸಚಿವ ಎಚ್‌.ಆಂಜನೇಯ

145 ವಸತಿ ಶಾಲೆಗಳ ಸ್ಥಾಪನೆ: ಸಚಿವ ಎಚ್‌.ಆಂಜನೇಯ
ಬೆಂಗಳೂರು , ಶುಕ್ರವಾರ, 12 ಆಗಸ್ಟ್ 2016 (18:00 IST)
ಪ್ರಸಕ್ತ ಸಾಲಿನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 145 ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸ್ಥಾಪಿಸಲು ಯೋಜನೆ ರೂಪಿಸಿಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದ ದಿನದಂದು ಈ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡುವ ಸರಕಾರದ ಬದ್ಧತೆ ಪ್ರಕಾರ ಕಾರ್ಯಗತಗೊಳ್ಳಲಿರುವ ಯೋಜನೆ ಎಂದು ತಿಳಿಸಿದರು.
 
ವಸತಿ ಶಾಲೆಗಲಿಗೆ 10 ಎಕರೆ ಸರಕಾರಿ ಅಥವಾ ಖಾಸಗಿ ಜಾಗವನ್ನು ಮೀಸಲಿಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಮೀನು ಹಂಸ್ತಾಂತರಿಸಿದ ನಂತರ ವಸತಿ ಶಾಲಾ ಕಟ್ಟಡಗಳು ತಲಾ 10 ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
 
ಈಗಾಗಲೇ ರಾಜ್ಯದ ವಸತಿ ಶಾಲೆಗಳಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೊಸದಾಗಿ ಸ್ಥಾಪನೆಯಾಗುವ 145 ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ 36 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅವಕಾಶ ಸಿಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

''ಕೇರಳಿಗರೇ ನಿಜವಾದ ಭಾರತೀಯರು'': ಮಾರ್ಕಂಡೇಯ ಕಾಟ್ಜು