Webdunia - Bharat's app for daily news and videos

Install App

ಈಗಲ್‌ಟನ್ ಭೂ ವಶ ಪ್ರಕರಣ: ಸರ್ಕಾರದ ವಿರುದ್ಧ ಪುಟ್ಟಸ್ವಾಮಿ ವಾಗ್ದಾಳಿ

Webdunia
ಶುಕ್ರವಾರ, 6 ಮಾರ್ಚ್ 2015 (16:53 IST)
ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿಡದಿ ಬಳಿ ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಈಗಲ್ಟನ್ ರೆಸಾರ್ಟ್‌‌ನಿಂದ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತಪರ ಹೋರಾಟಗಾರ ಪುಟ್ಟಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟಸ್ವಾಮಿ, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ 2014ರ ಜನವರಿ 14ರಂದೇ ಇತ್ಯರ್ಥ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ವಿಷಯದಲ್ಲಿ ಬೇಜವಾಬ್ದಾರಿ ಅನುಸರಿಸುತ್ತಿದೆ. 1500 ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿ ಇದಾಗಿದೆ. ವಸೂಲಾತಿಗಾಗಿ ಸಂಪುಟ ಉಪ ಸಮಿತಿಯನ್ನೂ ರಚಿಸಲಾಗಿದೆ. ಅಲ್ಲದೆ ರಾಜ್ಯದ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದರೆ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ಇಡೀ ಸರ್ಕಾರ ಈ ವಿಷಯದಲ್ಲಿ ನಿಷ್ಕ್ರಿಯ ನೀತಿಯನ್ನು ಅನುಸರಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. 
 
ಈ ರೆಸಾರ್ಟ್‌ನ್ನು ಒಟ್ಟು 509 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 77.19ಗುಂಟೆ ಭೂಮಿಯು ಸರ್ಕಾರಕ್ಕೆ ಸೇರಿದ್ದಾಗಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂ ಕೋರ್ಟ್, ಸರ್ಕಾರಿ ಜಾಗದ ಮಾರುಕಟ್ಟೆ ಮೌಲ್ಯ ನಿರ್ಧರಿಸಲು ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ 970 ಮೌಲ್ಯವುಳ್ಳ ಆಸ್ತಿ ಇದಾಗಿದೆ ಎಂದು ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳು, 2014ರ ಜೂನ್ ತಿಂಗಳಲ್ಲಿ ಸಮಿತಿಗೆ ವರದಿ ಸಲ್ಲಿಸಿದ್ದರು. ಆದರೆ ಸಮಿತಿ ಸದಸ್ಯರು ವರದಿ ಪಡೆದರೇ ವಿನಃ ಮತ್ತಾವ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಸರ್ಕಾರವನ್ನು ಆರೋಪಿಸಿದರು. 
 
ಕಾನೂನು ಸಚಿವರೇ ಸಮಿತಿಯ ಸದಸ್ಯರಾಗಿರುವ ಕಾರಣ ನ್ಯಾಯಾಂಗ ನಿಂದನೆಯಾಗಿದೆ. ಅದರ ಪರಿವೇ ಸಚಿವರಿಗಿಲ್ಲ. ಈ ಆಸ್ತಿಗಾಗಿ ಜಿಲ್ಲಾಡಳಿತ ಬಹುದೊಡ್ಡ ಹೋರಾಟ ನಡೆಸಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರ ವಿಫಲವಾಗಿದ್ದು, ಸರ್ಕಾರಕ್ಕೆ ತಲೆ ತಗ್ಗಿಸುವಂತಹ ವಿಷಯವಾಗಿದೆ. ಭೂಮಿ ಒತ್ತುವರಿಯಾಗಿ 8 ತಿಂಗಳುಗಳು ಕಳೆದಿದ್ದು, 1000 ಕೋಟಿಗೂ ಹೆಚ್ಚು ಆದಾಯ ಸರ್ಕಾರದ ಬೊಕ್ಕಸಕ್ಕೆ ಬೀಳಬೇಕಿದೆ. ಆದರೆ ಸರ್ಕಾರ ವಸೂಲಿಗೇ ಹಿಂದೇಟು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಈಗಲ್‌ಟನ್ ಹೊಂದಿದ್ದ 509 ಎಕರೆ ಜಮೀನಿನಲ್ಲಿ 132 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲದೆ ವಿಚಾರಣೆ ನಡೆಸಿದ್ದ ಕೋರ್ಟ್ 2003ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಿ, ಇದರಲ್ಲಿ ಯಾವುದು ಸರ್ಕಾರಿ ಜಮೀನು ಎಂದು ಪತ್ತೆ ಹಚ್ಚಿ ಎಂದು ಸರ್ಕಾರಕ್ಕೆ ಸೂಚಿಸಿತ್ತು. ಈ ನಡುವೆಯೇ ಈಗಲ್‌ಟನ್‌ನಲ್ಲಿ ಕ್ರಮೇಣ ರೆಸಾರ್ಟ್, ಬಡಾವಣೆ, ಗಾಲ್ಫ್, ಈಜುಕೊಳ ಸೇರಿದಂತೆ ಇತರ ಕಟ್ಟಡಗಳನ್ನು ನಿರ್ಮಿಸಿ, ಕೆಲವನ್ನು ಮಾರಾಟ ಮಾಡಿದೆ. ಬಳಿಕ 2014ರ ಜನವರಿಯಲ್ಲಿ ತೀರ್ಪಿತ್ತು ಸರ್ಕಾರ ಭೂಮಿಯ ವಶಕ್ಕೆ ಮುಂದಾಗಬೇಕೆಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments